ಸಚಿವರಿಂದ ಯುಜಿಡಿ(ಒಳಚರಂಡಿ) ಕಾಮಗಾರಿ ವೀಕ್ಷಣೆ/ ಸರ್ಕಾರಿ ಆಸ್ಪತ್ರೆಗೆ ಬೇಟಿ ಪರಿಶೀಲನೆ
ಶಹಾಪುರ: ಜನರ ಬಹುದಿನದ ಬೇಡಿಕೆಯಂತೆ ನಗರದಲ್ಲಿ ಅನುಷ್ಠಾನಗೊಳ್ಳಲಿರುವ ಒಳಚರಂಡಿ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ, ವೈಜ್ಞಾನಿಕವಾಗಿ ಕಾಮಗಾರಿ ಮಾಡಿ ನಗರದ ಅಭಿವೃದ್ಧಿಗೆ ಕೈಜೋಡಿಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು
ನಗರದಲ್ಲಿ ಪ್ರಗತಿಯಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಡಿ 292.98 ಕೋಟಿ ರೂ. ವೆಚ್ಚದ ಯುಜಿಡಿ(ಒಳಚರಂಡಿ) ಕಾಮಗಾರಿಯನ್ನು ವಿಕ್ಷೀಸಿ ಮಾತನಾಡಿದ ಅವರು, ಅನುದಾನ ಒದಗಿಸುವುದು ನನ್ನ ಕಾರ್ಯ, ಕಾಮಗಾರಿಗಳು ಗುಣಮಟ್ಟದೊಡನೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಜವಬ್ದಾರಿ ಅಧಿಕಾರಿಗಳದ್ದು, ಪೈಪ್ಲೈನ್ಗಾಗಿ ಅಗೆದು ಮಣ್ಣಿನ ಗುಂಡಿಯನ್ನು ಸಮಯದೊಳಗೆ ಮುಚ್ಚಬೇಕು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಅಂದಿನ ಕೆಲಸ ಅಂದೇ ನಡೆಸಿ, ಗುಂಡಿಗಳನ್ನು ಮುಚ್ಚುವ ಮೂಲಕ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. 292.98 ಕೋಟಿ ರೂ. ವೆಚ್ಚದ ಒಳಚರಂಡಿ ಕಾಮಗಾರಿಯೂ ನಗರಸಭೆಯ 31 ವಾರ್ಡ್ಗಳಲ್ಲಿ ನಡೆಯಲಿದ್ದು, ಈಗಾಗಲೇ ವಾರ್ಡ್ ನಂ 21, 25, 8, 1ನಲ್ಲಿ ಪ್ರಗತಿಯಲ್ಲಿದ್ದು, ಒಟ್ಟು 217 ಕಿ.ಮೀ ಪೈಪ್ಲೈನ್ ಇದ್ದು 8203 ಮಶೀನ್ ಹೊಲ್ ಮತ್ತು ರಿಸ್ಟಿಂಗ್ ಛೇಂಬರ್ ನಿರ್ಮಾಣ ಮತ್ತು 13,500 ಮನೆಗಳಿಗೆ ಗೃಹ ಸಂಪರ್ಕ ನೀಡಲಿದ್ದು, ಈಗಾಗಲೇ 923 ಮಶೀನ್ ಹೊಲ್ ಮುಗಿದಿದೆ. ಬೇನಕನಹಳ್ಳಿ (ಜೆ) ಬಳಿ 8 ಎಕರೆ 12 ಗುಂಟೆ ಭೂಮಿ ಖರೀದಿಸಲಾಗಿದ್ದು, ನಗರದ ತ್ಯಾಜ್ಯ ಸಂಗ್ರಹವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು. ಇದನ್ನೂ ಓದಿ: ನಾನು ಸಿಎಂ ಸೇರಿದಂತೆ 140 ಶಾಸಕರೂ ಒಂದೇ: ಡಿಕೆಶಿ
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸಿದ್ದು ಆರಬೋಳ, ಎಇ ಶಂಕರಗೌಡ, ಗೋಪಾಲ ಸುರಪುರ, ಸದ್ದಾಂ ದಾದುಲ್ಲಾ, ರವಿ ಎದುರುಮನಿ ಸೇರಿದಂತೆ ಇತರರು ಇದ್ದರು.
