ದಾವಣಗೆರೆಗೆ: ಗಣೇಶ ಹಬ್ಬ ಬಂದರೇ ಸಾಕು ಭಕ್ತಾದಿಗಳು ವಿಧವಿಧ ರೂಪಗಳಲ್ಲಿ ಗಣೇಶನ ಮೂರ್ತಿಯನ್ನು ತಯಾರಿಸಿ ಸಂಭ್ರಮ ಆಚರಣೆ ಮಾಡುತ್ತಾರೆ. ಸಾಮಾನ್ಯವಾಗಿ ಗಣೇಶನ ಮೂರ್ತಿಯನ್ನು ಮಣ್ಣಿನಿಂದ, ಬಾಳೆಹಣ್ಣು, ತೆಂಗಿನಕಾಯಿ ಹೀಗೆ ಹಲವಾರು ಬಗೆಯ ವಸ್ತುಗಳನ್ನು ಬಳಸಿಕೊಂಡು ಗಣೇಶ ಮೂರ್ತಿಯನ್ನು ತಯಾರು ಮಾಡುತ್ತಾರೆ. ಅದರಂತೆ ದಾವಣಗೆರೆಯಲ್ಲಿ ಸುಮಾರು 13 ಅಡಿ ಎತ್ತರದಲ್ಲಿ ಗೋವುಗಳ ಗಂಟೆಯಿಂದಲೇ ಗಣೇಶನ ಮೂರ್ತಿಯನ್ನು ತಯಾರಿಸಿದ್ದು ಎಲ್ಲರ ಗಮನ ಸೆರೆಯುತ್ತಿದೆ.
ಹೌದು, ಗಣಪತಿ ಸಮಿತಿ ದಾವಣಗೆರೆಗೆ ಪ್ರಸಿದ್ಧ ಪಡೆದಿದೆ. ಪ್ರತಿ ವರ್ಷವೂ ವಿಶೇಷವಾಗಿ ಗಣಪತಿ ವಿಗ್ರಹಗಳನ್ನು ತಯಾರು ಮಾಡುತ್ತದೆ. ರುದ್ರಾಕ್ಷಿ, ತೆಂಗಿಕಾಯಿ ಸೇರಿದಂತೆ ಹತ್ತಾರು ಸಾಮಗ್ರಿಗಳಿಂದ ಗಣೇಶ ಮಾಡಿ ಗಮನ ಸೆಳೆದಿದೆ. ಈ ವರ್ಷ ಗಂಟೆ ಗಣಪ ನಿರ್ಮಾಣ ಮಾಡಲಾಗಿದೆ. ಸುಮಾರು 3.5 ಕ್ವಿಂಟಾಲ್ ತೂಕದ ಗಂಟೆಗಳಲ್ಲಿ ಗಣೇಶ ವಿಗ್ರಹ ನಿರ್ಮಾಣ ಮಾಡಲಾಗಿದೆ. ನಂದಿ ಅಥವಾ ಹಸುವಿನ ಕೊರಳಲ್ಲಿ ಕಟ್ಟುವ ಗಂಟೆಯಿಂದ ಗಣೇಶ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಇದನ್ನೂ ಓದಿ: ಗೌರಿ, ಗಣೇಶ ಹಬ್ಬವು ಹಿಂದೂಗಳ ಸಾಂಪ್ರದಾಯಿಕ ಹಬ್ಬ: ಶಾಸಕ ಸತೀಶ್ ರೆಡ್ಡಿ
ದಾವಣಗೆರೆ ನಗರದ ತೋಗಟವೀರ ಕಲ್ಯಾಣ ಮಂಟಪದಲ್ಲಿ ಹಿಂದು ಯುವ ಶಕ್ತಿ ಬಳಗ ಈ ವಿಶೇಷ ಗಣೇಶನನ್ನು ಪ್ರತಿಷ್ಠಾಪಿಸಿದೆ. 9555 ಗಂಟೆಗಳ ಬಳಕೆ ಮಾಡಿ 13 ಅಡಿ ಎತ್ತರ, 8.5 ಅಡಿ ಅಗಲವಿರುವ ಗಣೇಶ ವಿಗ್ರಹವನ್ನು 10 ಜನ ಕಲಾವಿದರು 15 ದಿನಗಳ ಕಾಲ ಶ್ರಮ ಪಟ್ಟು ನಿರ್ಮಿಸಿದ್ದಾರೆ. 11 ದಿನಗಳ ಕಾಲ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ.
