ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಷ್ಟು ದಿನ ಮದುವೆ ಯಾವಾಗ, ಮದುವೆಯಾಗ ಎಂದು ಕೇಳುತ್ತಿರುವ ಅಭಿಮಾನಿಗಳಿಗೆ ಅನುಶ್ರೀ ಉತ್ತರ ನೀಡಿದ್ದಾರೆ.
ಹೌದು, ನಿರೂಪಕಿ ಅನುಶ್ರೀ ಅವರು ತಮ್ಮ ಬಹುದಿನದ ಗೆಳೆಯ ರೋಷನ್ ಅವರನ್ನು ಮದುವೆಯಾಗುವ ಮೂಲಕ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಅನುಶ್ರೀ ಹಾಗೂ ರೋಷನ್ ಅವರ ಮದುವೆಗೆ ಕಿರುತೆರೆ ಸೇರಿದಂತೆ ಕನ್ನಡ ಚಿತ್ರರಂಗದ ನಟ ನಟಿಯರು ಬಂದು ನವಜೋಡಿಗೆ ಹಾರೈಸಿದ್ದಾರೆ. ಇದನ್ನೂ ಓದಿ: ಇದೇ ಆಗಸ್ಟ್ 28ಕ್ಕೆ ಅನುಶ್ರೀ ಮದುವೆ!?
ಇಂದು ಗುರುವಾರ ಆ. 28 ರಂದು ಬೆಳಿಗ್ಗೆ 10:56ರ ಶುಭ ಮೂಹೂರ್ತದಲ್ಲಿ ಅನುಶ್ರಿ ಹಾಗೂ ರೋಷನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಕಗ್ಗಲಿಪುರ ಬಳಿಯ ಹೊರವಲಯದ ರೆಸಾರ್ಟ್ನಲ್ಲಿ ಮದುವೆ ನೆರವೇರಿದ್ದು, ಕಿರುತೆರೆ ಕಲಾವಿದರು, ಚಿತ್ರೋದ್ಯಮದ ಗಣ್ಯರು ನವಜೋಡಿಗೆ ಶುಭ ಹಾರೈಸಿದ್ದಾರೆ.

