ಬೆಂಗಳೂರು: ಬಿಜೆಪಿಯವರರು 2011ರಿಂದಲೇ ಚುನಾವಣೆಯಲ್ಲಿ ಇವಿಎಂಗಳನ್ನು ದುರ್ಬಳಕೆ ಮಾಡಿಕೊಂಡೇ ಬರುತ್ತಿದ್ದಾರೆ. ಬರೀ ಇವಿಎಂ ಮಾತ್ರವಲ್ಲ ಚುನಾವಣೆ ಅಂದರೆ ಬಿಜೆಪಿಯವರಿಗೆ ಅಕ್ರಮ. ಪ್ರತಿ ಹಂತದಲ್ಲೂ ಅಕ್ರಮ ಮಾಡಿಕೊಂಡು ಬರುತ್ತಿದ್ದಾರೆ ಎಂದು ಸಚಿವ ರಾಮಲಿಂಗ ರೆಡ್ಡಿಯವರು ಆರೋಪಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, 2011 ರಿಂದಲೇ ಚುನಾವಣೆ ಸಂದರ್ಭದಲ್ಲಿ ಅಕ್ರಮ ನಡೆಯುತ್ತಿದೆ. ಜರ್ಮನಿ, ಜಪಾನ್ ದೇಶದಲ್ಲಿ ಇವಿಎಂ ಮಿಷನ್‌ಗಳನ್ನು ತಯಾರು ಮಾಡುತ್ತಾರೆ. ಆದರೆ ಅಲ್ಲೇ ಇದನ್ನ ಬಳಕೆ ಮಾಡಲ್ಲ. ಹಾಗೆಯೇ ಅಮೆರಿಕ ಲಂಡನ್ನಲ್ಲೂ ಇವಿಎಂ ಬಳಕೆ ಮಾಡಲ್ಲ. ನಮ್ಮ ದೇಶದಲ್ಲಿ ಇವಿಎಂ ಬಳಕೆಯನ್ನ ನಮ್ಮ ಪಕ್ಷವೇ ಜಾರಿಗೆ ತಂದಿದ್ದು, ಆದರೆ ಅದನ್ನ ಬಿಜೆಪಿಯವರು ಅಕ್ರಮಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬಿಜೆಪಿ ಸಂಸದರು ಕರ್ನಾಟಕ ರಾಜ್ಯದ ದ್ರೋಹಿಗಳು..!
