ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಅದೆಷ್ಟೋ ಜನ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಕೇವಲ ಕರ್ನಾಟಕ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ, ಹೊರದೇಶ ಹೀಗೆ ಹಲವಾರು ದೇಶಗಳಿಂದ ಬಂದು ಬೆಂಗಳೂರು ನಗರದಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಾರೆ.
ಎಲ್ಲಿಂದಲೋ ಬಂದು ಇಲ್ಲಿ ನೆಲೆಯೂರಿ, ಬೆಂಗಳೂರ ಬಗ್ಗೆಯೇ ಒಡಿಸ್ಸಾ ಮೂಲದ ಯುವತಿ ಒಬ್ಬರು ಕೆಟ್ಟದಾಗಿ ಮಾತನಾಡಿದ ವಿಡಿಯೋ ಒಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ.
ಬೆಂಗಳೂರು ಅನ್ನ ತಿಂದು ಬೆಂಗಳೂರಲ್ಲೇ ಕೆಲಸ ಮಾಡುತ್ತಿರುವ ಹೊರರಾಜ್ಯದ ಯುವತಿ ಇದೀಗ ಬೆಂಗಳೂರು ನಗರ ಹಾಗೂ ಬೆಂಗಳೂರು ಜನರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದರಿಂದ ಓಡಿಸದ ಯುವತಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೌದು, ಬೆಂಗಳೂರಿಗರ ಬಗ್ಗೆ ನಾಲಿಗೆ ಹರಿಬಿಟ್ಟ ಅನ್ಯರಾಜ್ಯದ ಯುವತಿ ಮಾತಾಡಿರೋ ವಿಡಿಯೋ ವೈರಲ್ ಆಗಿದೆ. ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ಧಿ ಇಲ್ಲ, ಮಳೆ ಬರ್ತಿದ್ರೂ ವಾಹನ ಜೋರಾಗಿ ಓಡಿಸ್ತಾರೆ, ಬೆಂಗಳೂರಿನಲ್ಲಿ ಇರುವವರು ಅನಕ್ಷರಸ್ಥರು ಎಂದಿರುವ ಒಡಿಶಾ ಮೂಲದ ಯುವತಿಯ ಮಾತಿಗೆ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ: ಚುನಾವಣೆ ಅಂದರೆ ಬಿಜೆಪಿಯವರಿಗೆ ಅಕ್ರಮ: ರಾಮಲಿಂಗಾ ರೆಡ್ಡಿ
ಇನ್ನು ಈ ಬಗ್ಗೆ ಕರವೇ ರಾಜ್ಯಾಧ್ಯಕ್ಷ ಹೆಚ್ ಶಿವರಾಮೇಗೌಡ ಮಾತಾಡಿ, ಈ ಉತ್ತರ ಭಾರತ ಜನಕ್ಕೆ ಇರುವ ಜಾಗದಲ್ಲಿ ಯಾವುದೇ ಮೂಲಭೂತ ಸೌಕರ್ಯ ಇರೋದಿಲ್ಲ. ಒಂದು ಸಂಸ್ಕಾರ ಮತ್ತು ಸಂಸ್ಕೃತಿ ಇರೋದಿಲ್ಲ. ಅಲ್ಲಿ ಅವರ ಬದುಕು ಮೂರಾಬಟ್ಟೆ ಆಗಿರುತ್ತೆ. ಬದುಕುವುದಕ್ಕಾಗಿ ಇಲ್ಲಿಗೆ ಬರುತ್ತಾರೆ. ಇಲ್ಲಿನ ನೆಲ, ಭಾಷೆ ಕಲಿಬೇಕು ಅನ್ನೋದು ಅವರಲ್ಲಿ ಇಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲೇಬೇಕು ಅಂತ ಆಗ್ರಹಿಸಿದ್ದಾರೆ.
