ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ಮೇಲೆ ಹೊರಬಂದ ಮೇಲೆ ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ಫುಲ್ ಬಿಜಿಯಾಗಿದ್ದು, ಈಗಾಗಲೇ ಬೆಂಗಳೂರು, ರಾಜಸ್ಥಾನ ಹಾಗೂ ವಿದೇಶದಲ್ಲೂ ಕೂಡ ಚಿತ್ರೀಕರಣ ಬರದಿಂದ ಸಾಗುತ್ತಿದೆ. ಷರತು ಬದ್ಧ ಜಾಮೀನು ಪಡೆದಿರುವ ನಟ ದರ್ಶನ್ ಅವರಿಗೆ ಬೇಲ್ ಟೆನ್ಶನ್ ಶುರುವಾಗಿದೆ.
ಯೆಸ್…ಇತ್ತೀಚೆಗೆ ಡೆವಿಲ್ ಸಿನಿಮಾ ಶೂಟಿಂಗ್ ಗೆಂದು ಸಿನಿಮಾ ತಂಡದ ಜೊತೆ ವಿದೇಶಕ್ಕೆ ತೆರಳಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆ ರಾತ್ರಿ (ಶುಕ್ರವಾರ ಜುಲೈ 25) ರಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ರಾತ್ರಿ 11:45 ರ ವಿಮಾನದಲ್ಲಿ ಕೆಐಎಬಿಗೆ ದರ್ಶನ್ ಆಗಮಿಸಿದ್ದು, ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋಟ್ ನಿಂದ ಕುಟುಂಬದ ಜೊತೆ ಮನೆಯತ್ತ ಪ್ರಯಾಣ ಬೆಳೆಸಿದರು. ಇದನ್ನೂ ಓದಿ: ಥೈಲ್ಯಾಂಡ್ನಲ್ಲಿ ಕಾಟೇರ ಫುಲ್ ಜಾಲಿ ಜಾಲಿ..!
ಜುಲೈ 24 ರಂದು ಸುಪ್ರೀಂ ಕೋರ್ಟ್ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಬೇಲ್ ಮಂಜೂರು ಮಾಡಿದ ಕ್ರಮವನ್ನು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದ್ದು, ಹೈಕೋರ್ಟ್ನನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಪ್ರಕರಣ ಸಂಬಂಧ ನ್ಯಾಯಾಪೀಠ ಮಾಡಿದ ಪ್ರಶ್ನೆಗಳು ಡಿ ಗ್ಯಾಂಗ್ ಎದೆಯಲ್ಲಿ ಬೇಲ್ ರದ್ದಾಗುವ ಭಯ ಹೆಚ್ಚಿಸಿದೆ.
