ಐಪಿಎಲ್ 2025 ನೇ ಸಾಲಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅತ್ಯುತ್ತಮ ಆಟವನ್ನು ಆಡುತ್ತಿದ್ದು ನಿನ್ನೆ (ಮಂಗಳವಾರ ಮೇ 27) ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ಸಿಬಿ ಯು ಜಯಭೇರಿ ಬಾರಿಸಿದೆ.
ಹೌದು, ಈ ಸಲ ಕಪ್ ನಮ್ದೆ…ಈ ಸಲ ಕಪ್ ನಮ್ದೆ ಎನ್ನುವ ಅಭಿಮಾನಿಗಳ ಮುಖದಲ್ಲಿ ಭರವಸೆಯನ್ನು ಮೂಡಿಸಿರುವ ಆರ್ಸಿಬಿ ತಂಡವು ಈ ಬಾರಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದು ಫೈನಲ್ ಗೆ ಲಗ್ಗೆ ಇಡಲು ಸಜ್ಜಾಗಿದೆ.
ಇನ್ನು ಮಂಗಳವಾರ ನಡೆದ ಪಂದ್ಯದಲ್ಲಿ ಆರ್ ಸಿಬಿ ತಂಡದವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಲಖನೌ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಗಳ ಉತ್ತಮ ಮೊತ್ತದ ಸ್ಕೋರ್ ದಾಖಲಿಸಿತು.
227 ರನ್ ಗಳ ಟಾರ್ಗೆಟ್ ಚೇಸಿಂಗ್ ನಲ್ಲಿ ಆರ್ ಸಿಬಿಗೆ ಸಾಲ್ಟ್ (19 ಎಸೆತಗಳಲ್ಲಿ 30 ರನ್) ಮತ್ತು ವಿರಾಟ್ ಕೊಹ್ಲಿ (30 ಎಸೆತಗಳಲ್ಲಿ 54 ರನ್) ಗಳಿಸಿ ಉತ್ತಮ ಜೊತೆಯಾಟ ನೀಡಿದರು. ಪಾಟೀದಾರ್ 7 ಎಸೆತಗಳಲ್ಲಿ 14 ರನ್ ಹಾಗೂ ಲಿವಿಂಗ್ಸ್ಟೋನ್ 1 ಎಸೆತ ಎದುರಿಸಿ ಶೂನ್ಯ ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಆದರೆ ಮಯಾಂಕ್ ಅಗರ್ವಾಲ್ (23 ಎಸೆತಗಳಲ್ಲಿ 41 ರನ್) ಹಾಗೂ ಜಿತೇಶ್ ಶರ್ಮಾ (33 ಎಸೆತಗಳಲ್ಲಿ 85 ರನ್) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನ ಮೂಲಕ ಆರ್ ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
18ನೇ ಆವೃತ್ತಿಯ ಐಪಿಎಲ್ನ ಕೊನೆಯ ಲೀಗ್ ಪಂದ್ಯ ನಿನ್ನೆ (ಮೇ 27) ಮುಕ್ತಾಯಗೊಂಡಿದೆ. 70ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿ ಆಗಿದ್ದವು ಇದರಲ್ಲಿ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲೂ 2ನೇ ಸ್ಥಾನಕ್ಕೆ ತಲುಪಿದೆ.
ಲಕ್ನೋ ವಿರುದ್ಧ ಗೆಲ್ಲುತ್ತಿದ್ದಂತೆ ಬೆಂಗಳೂರು ತಂಡ ಹೊಸ ಚರಿತ್ರೆ ಸೃಷ್ಟಿಸಿದೆ. 18 ವರ್ಷಗಳ ಐಪಿಎಲ್ನಲ್ಲಿ ಇದೇ ಮೊದಲ ಬಾರಿಗೆ 227 ರನ್ ಚೇಸ್ ಮಾಡಿ ದಾಖಲೆ ಬರೆದಿದೆ. ಇದನ್ನೂ ಓದಿ: ಐಪಿಎಲ್ ರದ್ದು ಬಗ್ಗೆ ಐಪಿಎಲ್ ಮುಖ್ಯಸ್ಥ ಹೇಳಿದ್ದೇನು?
ಒಟ್ಟಿನಲ್ಲಿ ಈ ಬಾರಿ ಆರ್ಸಿಬಿ ತಂಡವು ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸುತ್ತಿದ್ದು, ಆರ್ಸಿಬಿ ತಂಡವು ಈ ಬಾರಿಯಾದರೂ ಕಪ್ಪು ಗೆದ್ದು ಬರಲೆಂದು ಅಭಿಮಾನಿಗಳು ವಿಧವಿಧ ರೀತಿ ಪೂಜೆ ಪುನಸ್ಕಾರಗಳ ಮೊರೆ ಹೋಗಿದ್ದಾರೆ.
