ರಾಯಚೂರು: ಕರ್ನಾಟಕದ ಹೆಮ್ಮೆಯ ಪ್ರಾಡಕ್ಟ್ ಎಂದರೆ ಅದು ಮೈಸೂರು ಸ್ಯಾಂಡಲ್ ಸೋಪ್. ಮೈಸೂರ್ ಸ್ಯಾಂಡಲ್ ಸೋಪ್ ಗೆ ತಮನ್ನಾ ಭಾಟಿಯಾ ಅವರು ರಾಯಭಾರಿ ಆಗಿರುವುದನ್ನು ಖಂಡಿಸಿ ಈಗಾಗಲೇ ಕರ್ನಾಟಕ ರಾಜ್ಯದ ಹಲವು ಕನ್ನಡ ಸಂಘಗಳು ವಿರೋಧ ವ್ಯಕ್ತಪಡಿಸುವುದರ ಜೊತೆಗೆ ಕನ್ನಡ ಚಿತ್ರರಂಗದ ನಟ, ನಟಿಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಕುರಿತು ನಟ ವಿನೋದ್ ಪ್ರಭಾಕರ್ ಅವರು ಪ್ರತಿಕ್ರಿಯೆಸಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕನ್ನಡ ಚಿತ್ರರಂಗದಲ್ಲಿ ಈ ಕುರಿತು ಈಗಾಗಲೇ ಮಾತುಕತೆ ನಡೆಯುತ್ತಿದ್ದು ನಮ್ಮ ಕನ್ನಡದವರೇ ನಮ್ಮ ಮೈಸೂರ್ ಸ್ಯಾಂಡಲ್ಸ್ ಹೋಪ್ ಗೆ ಬ್ರಾಂಡ್ ಹಾಗೆ ಆಗುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್ ಗೆ ತಮನ್ನಾ ರಾಯಭಾರಿಯಾಗಿ: ವಿವಾದಕ್ಕೆ ಸ್ಪಷ್ಟನೆ ಕೊಟ್ಟ MB ಪಾಟೀಲ್
ಇನ್ನು ನಮ್ಮ ರಾಜ್ಯದ ಪ್ರಾಡಕ್ಟ್ ಗೆ ನಾವು ರಾಯಭಾರಿಯಾಗಲು ಅವಕಾಶ ಸಿಕ್ಕರೆ ನಾವು ಖಂಡಿತ ಖುಷಿಪಟ್ಟು ರಾಯಭಾರಿಯಾಗುತ್ತೇವೆ ಎಂದಿದ್ದಾರೆ.
