Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸಗರ ಗ್ರಾಮದಲ್ಲಿ ಸಮಸ್ಯೆಗಳ ಸಾಲು; ಎಲ್ಲೇಡೆ ಸಮಸ್ಯೆಗಳದ್ದೇ ದರ್ಬಾರ್
  • State

ಸಗರ ಗ್ರಾಮದಲ್ಲಿ ಸಮಸ್ಯೆಗಳ ಸಾಲು; ಎಲ್ಲೇಡೆ ಸಮಸ್ಯೆಗಳದ್ದೇ ದರ್ಬಾರ್

admin May 27, 2025
Spread the love

ಶಹಾಪುರ: ಸ್ಥಳೀಯ ಸರಕಾರವೆಂಬ ಹೆಗ್ಗಳಿಕೆಯೊಂದಿಗೆ ಹಲವು ಹೊಣೆಗಾರಿಕೆಗಳನ್ನು ಹೊತ್ತ ಗ್ರಾಮ ಪಂಚಾಯಿತಿಗಳಲ್ಲಿ ಬ್ರಷ್ಟ ಬ್ರಹ್ಮಾಂಡವೇ ನಡೆಯುತ್ತಿದ್ದು, ತಾಲೂಕಿನ ಸಗರ ಗ್ರಾ. ಪಂ ನಲ್ಲಿ ಭಾರಿ ಅವ್ಯವಹಾರ ತಾಂಡವವಾಡುತ್ತಿದೆ. ನಿಯಮದ ಪ್ರಕಾರ ಯಾವ ಕೆಲಸವು ಆಗದೇ ಅವ್ಯವಸ್ಥೆಯ ಗೂಡಾಗಿದೆ ಎಂದು ದಲಿತ ಮುಖಂಡ ಶರಣು ಸಗರ ಆರೋಪಿಸಿದ್ದಾರೆ.

ಗ್ರಾ.ಪಂ ಪಿಡಿಓ ಮತ್ತು ಸಿಬ್ಬಂದಿಗಳ ನಿರ್ಲಕ್ಷದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸಿಗಬೇಕಾದ ಸರ್ಕಾರಿ ಯೋಜನೆಗಳು ಸಿಗುತ್ತಿಲ್ಲಾ. ಗ್ರಾಮ ಪಂಚಾಯಿತಿಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ. ರಾಜಾರೋಷವಾಗಿ ಭ್ರಷ್ಟಚಾರ ನಡೆಯುತ್ತಿದೆ. ಪಿಡಿಓ ಹಾಗೂ ಜನಪ್ರತಿನಿಧಿಗಳು ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ವರ್ಷಪೂರ್ತಿ ಕಳೆದರು ಸಹ ಒಂದು ಗ್ರಾಮಸಭೆಗಳು ನಡೆಯಲ್ಲಾ. ಗ್ರಾಮದಲ್ಲಿ ಚರಂಡಿ ಸಮಸ್ಯೆ, ಸ್ವಚ್ಚತೆ ಮರಿಚೀಕೆ, ವಸತಿ ಯೋಜನೆಗಳ ಕನಸು ಹೀಗೆ ಮತ್ತಿತರ ವಿಚಾರಗಳಲ್ಲಿ ಬ್ರಷ್ಟಚಾರ ನಡೆಸಲಾಗುತ್ತಿದೆ. ಕಾಮಗಾರಿಗಳನ್ನೆ ಮಾಡದೆ ನಕಲಿ ಬಿಲ್ ಸೃಷ್ಠಿಸಿ ವಿವಿಧ ಏಜೆನ್ಸಿಗಳ ಹೆಸರಲ್ಲಿ ಹಣ ಸಂದಾಯ ಮಾಡಿ ವ್ಯಾಪಕ ಭ್ರಷ್ಟಚಾರ ಮಾಡುತ್ತಿದ್ದಾರೆ. ಗ್ರಾ.ಪಂನಲ್ಲಿ ನಡೆಯುತ್ತಿರುವ ಭ್ರಷ್ಟತೆಯ ಬಗ್ಗೆ ತನಿಖೆ ಆಗಬೇಕು. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣುವ ತನಕ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದ್ದಾರೆ.

ಸರಕಾರವು ಗ್ರಾಮ ಪಂಚಾಯಿತಿಗಾಗಿ ಹೆಚ್ಚಿನ ಅನುದಾನ ನೀಡಿದರೂ ಪಿಡಿಓ ಆಲಕ್ಷದಿಂದ ಗ್ರಾಮ ಅಭಿವೃದ್ಧಿಯಾಗದೇ, ಮೂಲ ಸವಲತ್ತುಗಳಿಂದ ವಂಚಿತವಾಗುವಂತಾಗಿದೆ.

ಗ್ರಾಮಗಳಲ್ಲಿ ಸಮರ್ಪಕವಾಗಿ ಸ್ವಚ್ಚತೆ ಕಾರ್ಯ ಕೈಗೊಳ್ಳದೆ, ದುರಸ್ತಿ ಹೆಸರಿನಲ್ಲಿ ಲಕ್ಷಗಟ್ಟಲೇ ಹಣವನ್ನು ಲೂಟಿ ಮಾಡಿರುವ ಬಗ್ಗೆ ಗ್ರಾಮಸ್ಥರು ಆರೋಪಿಸುತ್ತಿದ್ದು ತನಿಖೆ ಆಗಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

ಹಳ್ಳಿಗಳಲ್ಲಿ ಚರಂಡಿಗಳು ತುಂಬಿ ತುಳುಕುತ್ತಿವೆ. ಪಿಡಿಓಗಳು ತಮ್ಮ ಆಪ್ತರು, ಸ್ನೇಹಿತರ ವಲಯದ ನಕಲಿ ಗುತ್ತಿಗೆದಾರರ ಹೆಸರಿಗೆ ಬೇಕಾಬಿಟ್ಟಿ ಹಣ ಪಾವತಿ ಮಾಡುತ್ತಾ ಲೂಟಿ ನಡೆಸುತ್ತಿದ್ದಾರೆ. ನರೇಗಾ ಕಾಮಗಾರಿಗಳಲ್ಲಿ ತಮ್ಮ ಆಪ್ತ ಗುತ್ತಿಗೆದಾರರಿಗೆ ಶೇ.40ರ ಸಾಮಗ್ರಿ ಹಣವನ್ನು ಹಾಕುತ್ತಿದ್ದಾರೆ ಎಂದು ಬಹುತೇಕರ ದೂರುತ್ತಿದ್ದಾರೆ.

ಪಿಡಿಓ ನಿರ್ಲಕ್ಷಕ್ಕೆ ವಸತಿ ಯೋಜನೆಗಳು ವಾಪಸ್

ಗ್ರಾ.ಪಂನಲ್ಲಿ ಬಸವ ವಸತಿ ಯೋಜನೆ, ಡಾ.ಬಿ.ಆರ್ ಅಂಬೇಡ್ಕರ್ ನಿವಾಸ್ ಯೋಜನೆ, ದೇವರಾಜು ಅರಸು ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆಯಡಿ ಮಂಜೂರಾಗಿದ್ದ ವಸತಿಗಳು ಗ್ರಾ.ಪಂ ಪಿಡಿಓ ನಿರ್ಲಕ್ಷಕ್ಕೆ ರದ್ದುಗೊಂಡು, ವಾಪಸ್ಸು ಆಗಿದ್ದು, ಗ್ರಾಮಸ್ಥರ ಸ್ವಂತ ಸೂರಿನ ಕನಸು ಭಗ್ನವಾಗಿದೆ. ರಾಜಕೀಯದ ಒತ್ತಡಕ್ಕೆ ಮಣಿದು ಬಂದ ವಸತಿ ಯೋಜನೆಗಳು ವಾಪಸ್ಸಾಗುತ್ತಿವೆ. ಕಳೆದ 2 ವರ್ಷಗಳಿಂದ ಈ ವರೆಗೆ ಯಾರೊಬ್ಬರಿಗೂ ವಸತಿಗಳನ್ನು ನೀಡುವ ಕೆಲಸ ಗ್ರಾ.ಪಂನವರು ಮಾಡಿಲ್ಲ ಎಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ತಿರುಪತಿ ಹತ್ತಿಕಟಿಗಿ ಆರೋಪಿಸಿದರು. ಇದನ್ನೂ ಓದಿ: ಗ್ರಾಮೀಣ ಯುವ ಸಮೂಹವನ್ನು ಸಬಲರನ್ನಾಗಿಸುವುದೇ ನಮ್ಮ ಗುರಿ: ಶರಣ್‌ ಪ್ರಕಾಶ್‌ ಪಾಟೀಲ್‌

ಅಧಿಕಾರಿಗಳು ಜನರ ನಿರೀಕ್ಷೆಗಳಿಗೆ ಸ್ಪಂದಿಸದೆ ಗ್ರಾಮಸ್ಥರು ಛೀಮಾರಿ ಹಾಕುತ್ತಿದ್ದಾರೆ. ಅಧಿಕಾರಿಗಳ ನಿ ನಿರ್ಲಕ್ಷಕ್ಕೆ ಸೂರಿನ ಕನಸು ದೂರವಾಗಿದೆ. ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಆದರೂ ಸ್ಪಂದಿಸುವ ಕೆಲಸ ಮಾಡುತ್ತಿಲ್ಲಾ. ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಸಹ ಅವರನ್ನೇ ದಾರಿತಪ್ಪಿಸುವ ಕೆಲಸ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಿಬ್ಬಂದಿಗಳು ಮಾಡುತ್ತಿದ್ದಾರೆ  ಎಂದರು.

About the Author

admin

Administrator

Visit Website View All Posts

Spread the love

Post navigation

Previous: ಗ್ರಾಮೀಣ ಯುವ ಸಮೂಹವನ್ನು ಸಬಲರನ್ನಾಗಿಸುವುದೇ ನಮ್ಮ ಗುರಿ: ಶರಣ್‌ ಪ್ರಕಾಶ್‌ ಪಾಟೀಲ್‌
Next: ದಾಖಲೆ ಬರೆದ ಆರ್ ಸಿಬಿ

Views:

16

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.