ಮಾಗಡಿ: ಭಾರತೀಯ ಮಾನಕ ಬ್ಯೂರೋ ಸಂಸ್ಥೆಯಿಂದ ವಸ್ತುಗಳ ಮೇಲಿನ ಸರ್ಕಾರದ ಪ್ರಮಾಣಿಕೃತ ಮುದ್ರೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ತಾಲೂಕಿನ ತಾಲೂಕಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಅಧ್ಯಕ್ಷರುಗಳಿಗೆ ಒಂದು ದಿನದ ಮೇರೆಗೆ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬು(ಧವಾರ ಮಾ. 05) ರಂದು ಭಾರತೀಯ ಮಾನಕ ಬ್ಯುರೋ ಸಂಸ್ಥೆಯ ವಿಜ್ಞಾನಿ ರವಿಚಂದರ್. ವಿ ಉಪನ್ಯಾಸ ನೀಡಿದರು ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿವಿಧ ಬಗೆಯ ಮೂಲಭೂತ ಅಭಿವೃದ್ಧಿಗಾಗಿ ಕರೆದುಸುವ ಸಂದರ್ಭದಲ್ಲಿ ಭಾರತೀಯ ಮಾನವ ಸಂಸ್ಥೆಯ (ಐ ಎಸ್ ಐ) ದೃಢೀಕರಿಸಿದ ವಸ್ತುಗಳನ್ನು ಖರೀದಿಸಬೇಕು. ಖರೀದಿಯ ವಸ್ತುಗಳ ಬಗ್ಗೆ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಬೇಕೆಂದು ಹಾಗೂ ತಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸವ ಜವಾಬ್ದಾರಿಯಾಗಿರುವುದರಿಂದ ಶುದ್ಧ ಕುಡಿಯುವ ನೀರು ವ್ಯವಸ್ಥೆ, ಆರೋಗ್ಯ ಶಿಕ್ಷಣ ಸೇರಿದಂತೆ ಮೂಲಭೂತ ವ್ಯವಸ್ಥೆಯ ಗುಣಮಟ್ಟವನ್ನು ಕಾಪಾಡಿ ಕಾಯ್ದುಕೊಳ್ಳಬೇಕೆಂದು ಈ ಮೂಲಕ ಕ್ವಾಲಿಟಿ ಗುಣಮಟ್ಟದ ಸಾಮಾನುಗಳನ್ನು ಖರೀದಿಸಿ ಬಳಸಬೇಕೆಂದು ತಿಳಿಸಿದರು. ಇದನ್ನೂ ಓದಿ: ಕೆ ಎಸ್ ಆರ್ ಟಿ ಸಿ ಘಟಕಕ್ಕೆ ಕೇರಳ ಸಾರಿಗೆ ಸಂಸ್ಥೆಯ ನಿರ್ದೇಶಕರ ಭೇಟಿ
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇ ಒ ಜೈಪಾಲ್ ನರೇಗಾ ಅಧಿಕಾರಿ ಚಂದ್ರಶೇಖರ್ ಭಾರತೀಯ ಮಾನಕ ಬ್ಯೂರೋ ಸಂಸ್ಥೆಯ ರವಿಚಂದ್ರನ್ ವಿ ಮತ್ತು ಶಿವಕುಮಾರ್, ಪಿಡಿಒ ಗಳಾದ ಪುರುಷೋತ್ತಮ್, ಉಮೇಶ್ ನಾಯ್ಕ್, ಕಾಂತರಾಜು, ನಾಗರಾಜ್, ರಾಜೀವ್, ಶಿವಕುಮಾರ್, ಕೃಷ್ಣಪ್ಪ, ರಾಕೇಶ್, ರಾಮಕೃಷ್ಣಪ್ಪ, ಸೋಮಶೇಖರ್, ನರಸಿಂಹಮೂರ್ತಿ, ಬೆಟ್ಟಸ್ವಾಮಿ, ಶಿವಕುಮಾರ್, ಸವಿತಾ, ರಾಮಯ್ಯ, ಬಸವರಾಜ್ ಹಾಗೂ ಕೆಲವು ಪಂಚಾಯತಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
