ಬೆಂಗಳೂರು: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳ ತಂಡವು ಇಂದು ಬುಧವಾರ ಮಾ. 05 ರಂದು ಬೆಂಗಳೂರು ಕೇಂದ್ರೀಯ ಕೆ ಎಸ್ ಆರ್ ಟಿ ಸಿ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿತು.
ಈ ಸಂದರ್ಭದಲ್ಲಿ ನಿಗಮದಲ್ಲಿನ ಕಾರ್ಮಿಕ ಸ್ನೇಹಿ ಹಾಗೂ ಪ್ರಯಾಣಿಕ ಸ್ನೇಹಿ ಉಪಕ್ರಮಗಳು ಹಾಗೂ ಸಾರಿಗೆಯೇತರ ಆದಾಯದ ವಿಷಯಗಳ ಬಗ್ಗೆ ಶ್ರೀ ವಿ.ಅನ್ಬುಕುಮಾರ್, ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಕ.ರಾ.ರ.ಸಾ. ನಿಗಮ ರವರಿಂದ ಶ್ರೀ.ಪಿ.ಎಸ್.ಪ್ರಮೋಜ್ ಸಂಕರ್, ಐ.ಒ.ಎಫ್.ಎಸ್. ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ವಿವರವಾಗಿ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ದಲಿತ ವಿರೋಧಿ ʼಕೈʼ ಸರಕಾರಕ್ಕೆ ಪಾಠ ಕಲಿಸಲು ಪ್ರತಿಭಟನೆ- ವಿಜಯೇಂದ್ರ
ನಿಗಮದ, ಘಟಕ, ಕಾರ್ಯಾಗಾರ ಹಾಗೂ ಕೇಂದ್ರ ಕಛೇರಿಗೆ ಭೇಟಿ ನೀಡಿದರು. ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ತಂಡವು ವಿವಿಧ ಮಾದರಿಯ ಬಸ್ ಬ್ರಾಂಡಿಂಗ್ ಮತ್ತು ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ.ನಂದಿನಿದೇವಿ ಕೆ. ಭಾಆಸೇ., ನಿರ್ದೇಶಕರು (ಸಿ ಮತ್ತು ಜಾ),ಇತರೆ ಹಿರಿಯ ಅಧಿಕಾರಿಗಳು, ಕ.ರಾ.ರ.ಸಾ. ನಿಗಮ, ಹಾಗೂ ಕೇರಳ ರಸ್ತೆ ಸಾರಿಗೆ ಸಂಸ್ಥೆಯಿಂದ ಶ್ರೀ ಎ.ಶಾಜಿ, ಆರ್ಥಿಕ ಸಲಹೆಗಾರರು ಮತ್ತು ಮುಖ್ಯ ಲೆಕ್ಕಾಧಿಕಾರಿ, ಶ್ರೀ ಉಲ್ಲಾಸ್ಬಾಬು, ಪ್ರಧಾನ ವ್ಯವಸ್ಥಾಪಕರು (ಎಸ್ಟೇಟ್), ಶ್ರೀ ನಿಶಾಂತ್ ಎಸ್., ಉಪ ಪ್ರಧಾನ ವ್ಯವಸ್ಥಾಪಕರು, (ಐ.ಟಿ), ಶ್ರೀ ನವೀನ್ ಎನ್.ಐ, ಸಮನ್ವಯ ಅಧಿಕಾರಿ (ಇಂಧನ ವಿಭಾಗ) ಹಾಗೂ ಜರ್ಮನಿ ಸರ್ಕಾರದ ಪ್ರತಿನಿಧಿ ಶಿರೀಸ್ ಮಹೇಂದ್ರು ರವರು ಉಪಸ್ಥಿತರಿದ್ದರು.
