ಶಹಾಪುರ: ನಗರದ ಜೀವ್ಹೇಶ್ವರ ಕಲ್ಯಾಣ ಮಂಟಪದ ಎದುರು ಕಿರಣಿ ಸಾಮಾಗ್ರಿ ವಿತರಿಸಲು ಕಲಬುರಗಿ ಮೂಲದ ಲಾರಿಯೊಂದು ನಗರಕ್ಕೆ ಬಂದಿದ್ದು, ರಸ್ತೆ ದಾಟುವ ವೇಳೆ ಕ್ರೇನ್ ಬಂದು ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿಯು ರಸ್ತೆಗೆ ಹುರುಳಿಬಿದ್ದಿದ್ದು ಲಾರಿ ಚಾಲಕನಿಗೆ ಗಾಯಗಳಾಗಿವೆ.
ಲಾರಿ ಚಾಲಕ ಮೊಹಮ್ಮದ್ ತಾಜ್‌ಹುದ್ದಿನ್ ಶಹಾಪುರದಿಂದ ಮರಳಿ ಕಲಬುರಗಿಗೆ ತೆರಳುತ್ತಿದ್ದ, ಇನ್ನೂ ಕ್ರೇನ್ ಆಂಧ್ರ ಮೂಲದಾಗಿದ್ದು ಕ್ರೇನ್ ಚಾಲಕ ಮಂಜುನಾಥ ಕೊಪ್ಪಳಕ್ಕೆ ತೆರಳುತ್ತಿದ್ದ. ಲಾರಿಯು ರಸ್ತೆ ದಾಟುವ ವೇಳೆ ಹಿಂದಿನಿಂದ ಬಂದ ಕ್ರೇನ್ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಪ್ಪಿದ ಭಾರೀ ಅನಾಹುತ
ಹೆಚ್ಚು ಜನದಟ್ಟನೆ ಇರುವ ರಸ್ತೆಯಾಗಿದ್ದು, ಲಾರಿಗೆ ಕ್ರೇನ್ ಡಿಕ್ಕಿ ಹೊಡೆದಿದ್ದು ಪಕ್ಕದಲ್ಲಿ ಕಾರ್, ಬೈಕ್‌ಗಳು ತೆರಳುತ್ತಿದ್ದವು ಕೂದಲೆಳೆಯ ಅಂತರದಲ್ಲಿ ಬಾರೀ ಅನಾಹುತ ತಪ್ಪಿದೆ. ನಿತ್ಯ ಅಡ್ಡದಿಡ್ಡಿಯಾಗಿ ವಾಹನಗಳು ಅದೇ ರಸ್ತೆಯಲ್ಲಿ ಸಂಚರಿಸಲಿದ್ದು ಓರ್ವ ಪೊಲೀಸ್ ಸಿಬ್ಬಂದಿಯು ಸಹ ನಿಯೋಜಿಸಿಲ್ಲ. ಪಾದಚಾರಿಗಳು ಜೀವ ಕೈಯಲ್ಲಿಡಿದು ಓಡಾಡುವ ಸ್ಥಿತಿ ಇದ್ದು, ಏನಾದರೂ ಅನಾಹುತಗಳಾದರೆ ಇದಕ್ಕೆ ಯಾರು ಹೊಣೆ. ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಸಾರ್ವಜನಿಕರ ಹಿತ ಕಾಪಾಡಬೇಕು ಎನ್ನುವುದು ಸಾರ್ವಜನಿಕರು ಆಗ್ರಹವಾಗಿದೆ.
