4 ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಣೆ

  • In State
  • February 4, 2020
  • 396 Views
4 ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಣೆ

 ಚಿನಾ, ಫೆ. 2 :  ಚೀನಾದಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ವೈರಸ್ ಈಗ ವಿಶ್ವಾದ್ಯಂತ ಹರಡುತ್ತಿದೆ. 24 ರಾಷ್ಟ್ರಗಳಿಗೆ ವೈರಸ್ ಹರಡಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಂತಾರಾಷ್ಟ್ರೀಯ ಆರೋಗ್ಯ ತುರ್ತು ಸ್ಥಿತಿ ಘೋಷಿಸಿದೆ.

ಚೀನಾದ ವುಹಾನ್ ನಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ವೈರಸ್ ಈಗ ವಿಶ್ವಾದ್ಯಂತ ಹರಡುತ್ತಿದೆ. 425ಮಂದಿಯನ್ನು ಬಲಿ ಪಡೆದಿದ್ದು, ಭಾರತ ಸೇರಿ ಒಟ್ಟು 24 ರಾಷ್ಟ್ರಗಳಿಗೆ ವೈರಸ್ ಹರಡಿದೆ. ಕರ್ನಾಟಕಕ್ಕೂ ಕೊರೊನಾ ವೈರಸ್ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಚೀನಾದಿಂದ ಕೇರಳದ ಮೂರನೇ ವ್ಯಕ್ತಿಯಲ್ಲಿ ವೈರಸ್‌ ಪತ್ತೆಯಾಗಿದ್ದು, ಸದ್ಯ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.-ಚೀನಾದಲ್ಲಿ ಕೊರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ವಿಶ್ವ ಆರೋಗ್ಯ ಸಂಸ್ಥೆಯ ಭಾಗವಾಗಿ ಅಮೆರಿಕದ ತಜ್ಞರು ಬಂದು ಸಹಾಯ ಮಾಡಲು ಚೀನಾ ಒಪ್ಪಿಗೆ ಸೂಚಿಸಿದೆ. -ಮೊದಲ ಕೊರೊನಾ ವೈರಸ್ ದೃಢಪಡಿಸಿದ ಬೆಲ್ಜಿಯಂ . ಕಳೆದವಾರ ವುಹಾನ್ ನಿಂದ ಬೆಲ್ಜಿಯಂ ಗೆ ಕರೆತಂದಿದ್ದ 9 ಮಂದಿಯಲ್ಲಿ ಓರ್ವ ನಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ವರದಿ.ಮೂವರಿಗೆ ಕೊರೊನಾ ವೈರಸ್ ದೃಢಪಟ್ಟ ಬಳಿಕ ಕೇರಳ ಸರಕಾರ “ವಿಪತ್ತು” ಘೋಷಣೆ ಮಾಡಿದ ಬಳಿಕ. ಕೇರಳ ಪ್ರವಾಸೋದ್ಯಮದ ಮೇಲೆ ಹೊಡೆತ ಬಿದ್ದಿದೆ. ಕೇರಳದಲ್ಲಿ ಬುಕ್ಕಿಂಗ್ ಆಗಿದ್ದ ಹೋಟೆಲ್ ಗಳು ಸಾಮೂಹಿಕವಾಗಿ ರದ್ದಾಗಿದೆ.

Related