ಹೊಲದಲ್ಲಿ ಸಿಕ್ತು 30 ಲಕ್ಷದ ವಜ್ರ

ಹೊಲದಲ್ಲಿ ಸಿಕ್ತು 30 ಲಕ್ಷದ ವಜ್ರ

ಮಧ್ಯಪ್ರದೇಶ : ಸರ್ಕಾರದಿಂದ ಗುತ್ತಿಗೆ ಪಡೆಯಲಾಗಿರುವ ಪನ್ನಾ ಬಳಿಯ ಜರುವಾಪುರದ ಗಣಿಯಲ್ಲಿ ಭಾನುವಾರ 6.47 ಕ್ಯಾರಟ್ 30 ಲಕ್ಷ ರೂ. ಬೆಲೆಬಾಳುವ ವಜ್ರ ಕೃಷಿಕ ಪ್ರಕಾಶ್ ಮಜುಂದಾರ್ ಕೈಗೆ ಸಿಕ್ಕಿದೆ. ಅದು ಕೂಡ 2 ವರ್ಷಗಳಲ್ಲಿ ಎರಡನೇ ಬಾರಿಗೆ ಇಂಥ ಬೃಹತ್ ಗಾತ್ರದ ವಜ್ರವು ಪ್ರಕಾಶ್ಗೆ ಸಿಕ್ಕಿದೆ. ಕಳೆದ ವರ್ಷ ಕೂಡ 7.44 ಕ್ಯಾರಟ್ ತೂಕದ ವಜ್ರವು ಪ್ರಕಾಶ್ಗೆ ಸಿಕ್ಕಿತ್ತು. ಆ ಬಳಿಕ 2-2.5 ಕ್ಯಾರಟ್ ತೂಕದ ವಜ್ರಗಳು ಮಾತ್ರವೇ ಆತನಿಗೆ ಲಭಿಸುತ್ತಿದ್ದವು.

ಜಿಲ್ಲೆಯಲ್ಲಿ ಸರ್ಕಾರದ ಸಮೀಕ್ಷೆ ಪ್ರಕಾರ 12 ಲಕ್ಷ ಕ್ಯಾರಟ್ ವಜ್ರದ ರಾಶಿ ಭೂಮಿಯೊಳಗೆ ಇದೆ. ಸ್ಥಳೀಯ ರೈತರಿಗೆ ಅನುಕೂಲಕ್ಕಾಗಿ ಸಣ್ಣ ಪ್ರದೇಶಗಳನ್ನು ಗಣಿಗಾರಿಕೆಗೆ ಗುತ್ತಿಗೆ ಆಧಾರದ ಮೇಲೆ ಸರಕಾರ ನೀಡುತ್ತಿದೆ. ಸಿಕ್ಕ ವಜ್ರವನ್ನು ಜಿಲ್ಲಾ ಗಣಿಗಾರಿಗೆ ಅಧಿಕಾರಿಗೆ ಒಪ್ಪಿಸಿ, ನಿಗದಿತ ಹಣ ಪಡೆಯುತ್ತಾರೆ.

Related