ಇಪ್ಪತ್ತೇಳು ಪ್ರಯಾಣಿಕರು : ಪೊಲೀಸರು ಶಾಕ್..!!

ಇಪ್ಪತ್ತೇಳು ಪ್ರಯಾಣಿಕರು : ಪೊಲೀಸರು ಶಾಕ್..!!

ಲಕ್ನೋ ,ಜು 11 : ಸಾಮಾನ್ಯ ಆಟೋದಲ್ಲಿ ಪ್ರಯಾಣಿಸುವ ವೇಳೆ ನಾವು ಇಬ್ಬರು ಅಥವಾ ಮೂವರು ಪ್ರಯಾಣಿಕರನ್ನು ಕಾಣುತ್ತೇವೆ. ಆದರೆ ಇಲ್ಲೋಬ್ಬ ಆಟೋ ಚಾಲಕ ಬರೋಬ್ಬರಿ ೨೭ ಮಂದಿಯನ್ನು ತನ್ನ ಆಟೋದಲ್ಲಿ ತುಂಬಿಸಿಕೊಂಡು ಸಂಚಾರ ಮಾಡುತ್ತಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಯುಪಿಯ ಫತೇಪುರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಬಕ್ರೀದ್ ಹಿನ್ನೆಯಲ್ಲಿ ನಮಾಜ್ ಮಾಡಲು ಕೆಲವರು ಆಟೋದಲ್ಲಿ ಬಿಂಡ್ಕಿಗೆ ಬಂದಿದ್ದರು. ಆದರೆ ೬ ಸೀಟ್ ಸಾಮಾರ್ಥ್ಯದ ಆಟೋದಲ್ಲಿ ಬರೋಬ್ಬರಿ 27 ಮಂದಿಯನ್ನು ತುಂಬಿಸಿಕೊಂಡು ಆಟೋ ಚಾಲಕ ಬಂದಿದ್ದಾನೆ. ಆಟೋದಲ್ಲಿ ಎಲ್ಲಾ ಪ್ರಯಾಣಿಕರು ಮಹಾರಾಷ್ಟ್ರದವರು ಎಂಬ ಮಾಹಿತಿ ಲಭ್ಯವಾಗಿದೆ.

ಆಟೋ ಚಾಲಕ ವೇಗವಾಗಿ ತೆರಳುತ್ತಿದ್ದ ವೇಳೆ ಅನುಮಾನಗೊಂಡ ಪೊಲೀಸರು ಆಟೋವನ್ನು ತಡೆದು ನಿಲ್ಲಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಆಟೋ ತಡೆದು ನಿಲ್ಲಿಸಿದ ಬಳಿಕ ಪೊಲೀಸರು ಪ್ರಯಾಣಿಕರನ್ನು ಕೆಳಗಿಳಿಯುವಂತೆ ಹೇಳಿದ್ದರು.

ಈ ವೇಳೆ ಎಣಿಸುತ್ತಾ ಹೋದ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಆಟೋದಿಂದ ಮಕ್ಕಳು ಸೇರಿ ಬರೋಬ್ಬರಿ 27 ಮಂದಿ ಕೆಳಗಿಳಿದಿದ್ದರು. ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು, ಆಟೋ ಚಾಲಕನ ವಿರುದ್ಧ ತಕ್ಷಣ ಕ್ರಮಕೈಗೊಂಡಿರುವ ಪೊಲೀಸರು ಆಟೋವನ್ನು ಸೀಜ್ ಮಾಡಿದ್ದಾರೆ.

Related