2020- ಸಿಎಂ ಲೆಕ್ಕ

2020- ಸಿಎಂ ಲೆಕ್ಕ

ಬೆಂಗಳೂರು, ಮಾ. 05: ಸಿಎಂ ಬಿಎಸ್ ಯಡಿಯೂರಪ್ಪ ಇಂದು 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ರೈತರಿಗೆ ಹಾಗೂ ಮಹಿಳೆಯರಿಗೆ ಹಲವು ಕೊಡುಗೆಗಳನ್ನ ನೀಡಿದ್ದಾರೆ. ಹಾಗೇ ಮದ್ಯಪ್ರಿಯರು ಹಾಗೂ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ.

*ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವಲಂಬಿತರಿಗೆ ನಗದು ರಹಿತ ಶಸ್ತ್ರಚಿಕಿತ್ಸೆ- 50 ಕೋಟಿ ಮೀಸಲು

*ಮುದ್ರಾಂಕ ಶುಲ್ಕ ಪಾವತಿಗೆ ಆನ್ಲೈನ್ ವ್ಯವಸ್ಥೆ

*ಎಸ್ಎಸ್ಎಲ್ಸಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ತಲಾ 1 ಲಕ್ಷ ಪ್ರಶಸ್ತಿ: 60 ಲಕ್ಷ ಮೀಸಲು

*ಸುರಕ್ಷಾ ಆಯಪ್ ರಾಜ್ಯಾದ್ಯಂತ ವಿಸ್ತರಣೆ

*ಶಿವಮೊಗ್ಗದಲ್ಲಿನ ತಾವರೆಕೊಪ್ಪ ಮಿನಿ ಮೃಗಾಲಯ ಅಭಿವೃದ್ಧಿಗೆ 5 ಕೋಟಿ ಮೀಸಲು.. ಜೋಗಜಲಪಾತಕ್ಕೆ ಟೂರಿಸಂ ಸರ್ಕ್ಯೂಟ್ ಯೋಜನೆ.. ರಾಮನಗರದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ- 2 ಕೋಟಿ ಮೀಸಲು

*ಕೊಪ್ಪಳದ ಅಂಜನಾದ್ರಿ ಬೆಟ್ಟದ ದೇವಾಲಯ ಅಭಿವೃದ್ಧಿ – 20 ಕೋಟಿ

ಬದಾಮಿ ಸಮಗ್ರ ಅಭಿವೃದ್ಧಿಗೆ-25 ಕೋಟಿ ಮೀಸಲು

*ಪ್ರವಾಸೋದ್ಯಮ ಅಭಿವೃದ್ಧಿಗೆ 500 ಕೋಟಿ .. ಜಾಹಿರಾತು ಮತ್ತು ಇತರೆ ಚಟುವಟಿಕೆಗಳಿಗೆ 100 ಕೋಟಿ ಮೀಸಲು

*ಜನವರಿ 1ರಂದು ಜಕಣಾಚಾರಿ ಸಂಸ್ಮರಣಾ ದಿನ

*ಚಿತ್ರದುರ್ಗದಲ್ಲಿ ನಿಜಲಿಂಗಪ್ಪ ಅವರ ಮನೆಯ ಸಂರಕ್ಷಣೆ- 5 ಕೋಟಿ ಮೀಸಲು. ಸಂತ ಶಿಶುನಾಳ ಷರೀಫರ ಸಮಾಧಿ ಅಭಿವೃದ್ಧಿ -5 ಕೋಟಿ.

*ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ

*ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಅಂಡರ್ಗ್ರೌಂಡ್ ಪಾರ್ಕಿಂಗ್ ಯೋಜನೆ.

*ಸ್ಮಾರ್ಟ್ ಸಿಟಿ ಯೋಜನೆಯಡಿ 90 ಎಲೆಕ್ಟ್ರಿಕ್ ಬಸ್ಗಳ ಖರೀದಿ

*ಬಿಎಂಟಿಸಿಗೆ 100 ಹೊಸ ಎಸಿ ಬಸ್ಗಳ ಸೇರ್ಪಡೆ

*ಆಯ್ದ ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗಾಗಿ, ಸ್ಯಾನಿಟರಿ ನ್ಯಾಪ್ಕಿನ್ ಇತರೆ ಸೌಲಭ್ಯ ಇರುವ ವಿಶ್ರಾಂತಿ ಕೊಠಡಿ

*ಬೆಂಗಳೂರಿನಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಶುಭ್ರ ಬೆಂಗಳೂರು ಯೋಜನೆ- 999 ಕೋಟಿ ಮೀಸಲು.. ನಗರದ ಕೆರೆಗಳ ಅಭಿವೃದ್ಧಿಗೆ 317 ಕೋಟಿ ಮೀಸಲು

*ರಾಮನಗರದಲ್ಲಿ ಎಲೆಕ್ಟ್ರಿಕಲ್ ವೆಹಿಕಲ್ಸ್ ಆಯಂಡ್ ಎನರ್ಜಿ ಸ್ಟೋರೇಜ್ ಕ್ಲಸ್ಟರ್ -10 ಕೋಟಿ ಅನುದಾನ

*ನವೆಂಬರ್ನಲ್ಲಿ ಇನ್ವೆಸ್ಟ್ ಕರ್ನಾಟಕ 2020 ಕಾರ್ಯಕ್ರಮ

*ಕ್ರೀಡಾ ಕೌಶಲ್ಯ ತರಬೇತಿಗೆ 5 ಕೋಟಿ

*ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 5 ಕೋಟಿ.

*ಕಟ್ಟಡ ಕಾರ್ಮಿಕರಿಗೆ ಮುಖ್ಯಮಂತ್ರಿ ಆರೋಗ್ಯ ಸುರಕ್ಷಾ ಯೋಜನೆ

*ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ 500 ಕೋಟಿ. ಸುಧಾಮೂರ್ತಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್

  • ಜೀವನ ಚೈತ್ರಾ ಯಾತ್ರಾ ಯೋಜನೆಯಡಿ 60 ವರ್ಷ ಮೀರಿದ ಬಿಪಿಎಲ್ ಕಾರ್ಡ್ದಾರರಿಗೆ ದೇಶದ ಪ್ರಸಿದ್ಧ ತೀರ್ಥಕ್ಷೇತ್ರಗಳ ದರ್ಶನ: 20 ಕೋಟಿ ಮೀಸಲು

*ಅನಂತ್ಕುಮಾರ್ ಪ್ರತಿಷ್ಠಾನಕ್ಕೆ 20 ಕೋಟಿ ಅನುದಾನ

*ಮನೆಮನೆಗೆ ಗಂಗೆ- ನೂತನ ಯೋಜನೆ ಜಾರಿ.

*ವನಿತಾ ಸಂಗಾತಿ ಯೋಜನೆಯಡಿ ಗಾರ್ಮೆಂಟ್ಸ್ ಮಹಿಳೆಯರಿಗೆ ಮಾಸಿಕ ಬಸ್ ಪಾಸ್: 25 ಕೋಟಿ ಅನುದಾನ ಮೀಸಲು

*ಬೆಂಗಳೂರು ಏರ್ಪೋರ್ಟ್ನಲ್ಲಿ ಕೆಂಪೇಗೌಡರ 100 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ

*ಬೆಂಗಳೂರಿನ 4 ದಿಕ್ಕಿನಲ್ಲಿ 4 ಕಲಾಕ್ಷೇತ್ರಗಳು..ಬೆಂಗಳುರು ಒನ್ ಮಾದರಿಯಲ್ಲಿ ಗ್ರಾಮ ಒನ್ ಕೇಂದ್ರಗಳ ಸ್ಥಾಪನೆ

*ಮೈಸೂರು ರಸ್ತೆಯಲ್ಲಿ ಕೆಂಗೇರಿವರೆಗೆ ಮೆಟ್ರೋ ಮಾರ್ಗ.. ಕನಕಪುರ ರಸ್ತೆಯಲ್ಲಿ ಅಂಜನಾಪುರ ಟೌನ್ಶಿಪ್ವರೆಗೆ ಮೆಟ್ರೋ ಮಾರ್ಗ.. 2020ರ ವೇಳೆಗೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತ

*ಕೆಎಸ್ಆರ್ಟಿಸಿಗೆ 2,450 ಹೊಸ ಬಸ್ ಖರೀದಿ

*ಕೆ.ಸಿ ಜನರಲ್ ಹಾಗೂ ಸಿ.ವಿ ರಾಮನ್ ಆಸ್ಪತ್ರೆಯಲ್ಲಿ ಕ್ಯಾತ್ ಲ್ಯಾಬ್ ಸ್ಥಾಪನೆ.

*ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ಉಚಿತ ಡಯಾಲಿಸಿಸ್

*ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದ ಬಸವೇಶ್ವರ ಕಂಚಿನ ಪ್ರತಿಮೆ ನಿರ್ಮಾಣ-20 ಕೋಟಿ ಮೀಸಲು

*ಬಸವಕಲ್ಯಾಣದಲ್ಲಿ 500 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ

*ಪೊಲೀಸ್ ಸಿಬ್ಬಂದಿಗೆ ಗೃಹ ಭಾಗ್ಯ ಯೋಜನೆ- 200 ಕೋಟಿ ಮೀಸಲು

*ಬೆಂಗಳೂರಿಗೆ 75 ಹೊಸ ಹೊಯ್ಸಳ ವಾಹನ

*ರಾಜ್ಯದಲ್ಲಿ 10 ಹೊಸ ಅಗ್ನಿಶಾಮಕ ಠಾಣೆ ಸ್ಥಾಪನೆ

*ಶಿಕ್ಷಕ ಮಿತ್ರ ಮೊಬೈಲ್ ಆಯಪ್ ಪರಿಚಯ

*ಹಾನಿಯಾದ ಶಾಲೆಗಳ ಪುನರ್ನಿರ್ಮಾಣಕ್ಕೆ 758 ಕೋಟಿ

*ಪೆಟ್ರೋಲ್ ಮೇಲಿನ ತೆರಿಗೆ ಶೇ. 32 ರಿಂದ 35ಕ್ಕೆ ಹೆಚ್ಚಳ, ಡೀಸಲ್ ಮೇಲಿನ ತೆರಿಗೆ ಶೇ 21 ರಿಂದ ಶೇ. 24ಕ್ಕೆ ಏರಿಕೆ..ಪರಿಣಾಮ ಪೆಟ್ರೋಲ್ ದರ ಲೀಟರ್ಗೆ 1.60, ಡೀಸೆಲ್ ಬೆಲೆ ಲೀಟರ್ಗೆ ಹೆಚ್ಚಳ 1.59 ಹೆಚ್ಚಳ

*ಪರಿಶಿಷ್ಟ ಜಾತಿ-ಪಂಗಡ ಅಭಿವೃದ್ಧಿಗೆ 26,930 ಕೋಟಿ.. ಎಸ್ಸಿ ಎಸ್ಟಿ ನಿರುದ್ಯೋಗಿ ಯುವಕ ಯುವತಿಯರಿಗೆ ಸಾಲ ಸೌಲಭ್ಯ. ಎಸ್ಸಿ ಎಸ್ಟಿ ಸಹಕಾರ ಸಂಘಗಳಿಗೆ ₹20 ಲಕ್ಷ ಷೇರು ಬಂಡವಾಳ

*ಸರ್ಕಾರಿ ಕಚೇರಿಗಳು ಒಂದೇ ಕಡೆ ಕಾರ್ಯನಿರ್ವಹಿಸಲು ಆನಂದರಾವ್ ಸರ್ಕಲ್ ಬಳಿ ನೂತನ ಕಟ್ಟಡ

*ಮದ್ಯದ ದರ ಶೇ. 6ರಷ್ಟು ಹೆಚ್ಚಳ

*20 ಕೋಟಿ ವೆಚ್ಚದಲ್ಲಿ ಹಾವೇರಿಯಲ್ಲಿ 20 ಹಾಸಿಗೆಗಳ ಆಸ್ಪತ್ರೆ

*ಮಾರುಕಟ್ಟೆಗೆ ತ್ವರಿತವಾಗಿ ಮೀನುಗಳನ್ನ ಸಾಗಿಸಲು ಮೀನುಗಾರರಿಗೆ ದ್ವಿಚಕ್ರವಾಹನ

*ಆರ್ಯವೈಷ್ಯ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಮೀಸಲು

*ಮಹದಾಯಿ ಯೋಜನೆ: ಕಾಮಗಾರಿ ಆರಂಭಿಸಲು 500 ಕೋಟಿ.. ಎತ್ತಿನಹೊಳೆ ಯೋಜನೆಗೆ 1500 ಕೋಟಿ.

*ನವ ನಗರೋತ್ಥಾನ ಯೋಜನೆ- 8,344 ಕೋಟಿ ಮೀಸಲು

*ಬೆಂಗಳೂರು ಸುತ್ತಮುತ್ತಲ 110 ಹಳ್ಳಿಗಳಿಗೆ ಅನುದಾನ. ಎರಡು ವರ್ಷಕ್ಕೆ 1000 ಕೋಟಿ, 2020-21 ನೇ ಸಾಲಿಗೆ 500 ಕೋಟಿ.

*ಸಿಲ್ಕ್ಬೋರ್ಡ್ ಜಂಕ್ಷನ್ನಿಂದ ಏರ್ಪೋರ್ಟ್ ರಸ್ತೆವರೆಗೆ ಔಟರ್ ರಿಂಗ್ರೋಡ್- 14,500 ಕೋಟಿ ಮೀಸಲು

*ಹಾಪ್ಕಾಮ್ಸ್ ಅಭಿವೃದ್ಧಿಗೆ ಕೃಷಿ ರೈಲು ಯೋಜನೆ ಬಳಸಿಕೊಳ್ಳಲಾಗುವುದು.

*5 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ -75 ಕೋಟಿ ವೆಚ್ಚ

*ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ ಹಾರಿ 1.5 ಕೋಟಿ ಮೀಸಲು.

*ಸಮಗ್ರ ವರಾಹ ಅಭಿವೃದ್ಧಿ ಯೋಜನೆ ಜಾರಿ 5 ಕೋಟಿ ಮೀಸಲು

*ರೇಷ್ಮೆ ಹುಳು ಸಂಸ್ಕರಣಾ ಘಟಕ ಸ್ಥಾಪನೆ

*ಸಾವಯವ ಕೃಷಿ ಪ್ರೋತ್ಸಾಹಿಸಲು 200 ಕೋಟಿ ರೂ. ಮೀಸಲು

*ಕಿಸಾನ್ ಸಮ್ಮಾನ್ ಯೋಜನೆಗೆ 2,600 ಕೋಟಿ ಮೀಸಲು.

*ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ಗಳ ಸ್ಥಾಪನೆ

*ರೈತರಿಗೆ ಪೂರ್ವಸಂಸ್ಕರಿತ ಹಾಗೂ ಪಾಲಿಮಾರ್ ಲೇಪಿತ ಬೀಜಗಳ ಪೂರೈಕೆ.

*ರೈತರಿಗೆ ಕೇಂದ್ರದ 6 ಸಾವಿದರ ಜೊತೆಗೆ ರಾಜ್ಯ ಸರ್ಕಾರದಿಂದ 4 ಸಾವಿರ ಸಹಾಯಧನ.

*ಸಣ್ಣ ಮತ್ತು ಅತೀ ಸಣ್ಣ ರೈತರಿಗೆ 10 ಸಾವಿರ ವಾರ್ಷಿಕ ಹಣಕಾಸು ನೆರವು.

*ರೈತರಿಗೆ, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್

*ಭಾಗ್ಯಲಕ್ಷ್ಮೀ ಯೋಜನೆ, ಶಾಲಾ ಮಕ್ಕಳಿಗೆ ಬೈಸಿಕಲ್ ಯೋಜನೆ ಮುಂದುವರೆಸಲಾಗುವುದು.

 

Related