‘ಮೃತಪಟ್ಟ ಕೋತಿಗಾಗಿ 20 ಲಕ್ಷ

‘ಮೃತಪಟ್ಟ ಕೋತಿಗಾಗಿ 20 ಲಕ್ಷ

ಮೈಸೂರು, ಫೆ. 17 : ಪ್ರೀತಿಯಿಂದ ಸಾಕಿದ ಕೋತಿಗೆ ದೇವರ ಸ್ಥಾನ ನೀಡಿ ದೇವಸ್ಥಾನವನ್ನು ಕಟ್ಟುವ ಮೂಲಕ ಮಾಜಿ ಸಚಿವ ಸಾ ರಾ ಮಹೇಶ್ ತಮ್ಮ ಪ್ರಾಣಿ ಪ್ರೀತಿಯನ್ನು ಅನಾವರಣ ಮಾಡಿದ್ದಾರೆ.
ಮೈಸೂರಿನ ದಟ್ಟಗಳ್ಳಿಯ ತಮ್ಮ ಫಾರಂ ಹೌಸ್ನಲ್ಲಿ ಚಿಂಟು ಎಂಬ ಹೆಸರಿನ ಕೋತಿಯು ಸಾವನಪ್ಪಿದ್ದು, ಹೀಗಾಗಿ ದೇಗುಲವನ್ನು ಶಾಸ್ತ್ರೋಕ್ತವಾಗಿ ಉದ್ಘಾಟನೆ ಮಾಡಲಾಗಿದೆ. ಬರೋಬ್ಬರಿ 20 ಲಕ್ಷ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.

ಮಾಡಲಾಗಿದೆ. ಇನ್ನೂ ಕಾರ್ಯಕ್ರಮಕ್ಕೆ ಕೆಲವೇ ಕೆಲವು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ಹೊಸ ವರ್ಷದ ದಿನ ವಿದ್ಯುತ್ ತಗುಲಿ ಚಿಂಟು ಕೋತಿ ಮೃತಪಟ್ಟಿದ್ದು, ಈ ಸಮಯದಲ್ಲಿ ಸಿಂಗಾಪುರ್ ಪ್ರವಾಸದಲ್ಲಿದ ಸಾ.ರಾ ಮಹೇಶ್. ಪ್ರವಾಸ ಮೊಟಕುಗೊಳಿಸಿ ವಾಪಸ್ಸಾಗಿದ್ದರು. ಕೋತಿಯೊಂದಿಗೆ ಅವಿನಭಾವ ಸಬಂಧ ಹೊಂದಿದ್ದರು.

Related