120 ಮಂದಿ ಅಸ್ವಸ್ಥಗೊಂಡಿದ್ದಕ್ಕೆ ಕೊಳಚೆ ನೀರು ಪೂರೈಕೆ ಕಾರಣ!

120 ಮಂದಿ ಅಸ್ವಸ್ಥಗೊಂಡಿದ್ದಕ್ಕೆ ಕೊಳಚೆ ನೀರು ಪೂರೈಕೆ ಕಾರಣ!

ಬೆಂಗಳೂರು: ಸಿಲಿಕಾನ್ ಸಿಟಿಯ ಜನ ಒಂದಲ್ಲ ಒಂದು ಕಾರಣಕ್ಕೆ ತೊಂದರೆಯನ್ನು ಅನುಭವಿಸುತ್ತಿರುತ್ತಾರೆ.

ಹೌದು, ಬೆಂಗಳೂರಿನ ಇಲೆಕ್ಟ್ರಾನಿಕ್ಸ್ ಸಿಟಿಯ ಅಪಾರ್ಟ್ಮೆಂಟ್ ಒಂದರಲ್ಲಿ ಸಂಕೀರ್ಣಕ್ಕೆ ಸರಬರಾಜು ಗೊಂಡ ನೀರಿನಲ್ಲಿ ಕೊಳಚೆ ನೀರು ಸೇರಿದ್ದರಿಂದಲೇ 120 ಮಂದಿ ಅಸ್ತವ್ಯಸ್ತಗೊಂಡಿದ್ದಾರೆ ಎಂದು ವರದಿಗಳನ್ನು ಮೂಲಕ ತಿಳಿದು ಬಂದಿದೆ.

ಜೂನ್.5ರಂದು ಇಲೆಕ್ಟ್ರಾನಿಕ್ಸ್ ಸಿಟಿಯ ಹೊಸ ರಸ್ತೆಯಲ್ಲಿರುವ ಮಹಾವೀರ್ ರಾಂಚಸ್ ಅಪಾರ್ಟ್‌ಮೆಂಟ್‌ನಲ್ಲಿ ಕಲುಷಿತ ನೀರು ಕುರಿತು 98 ಮಕ್ಕಳು ಮತ್ತು ಹಿರಿಯ ನಾಗರೀಕರು ಸೇರಿದಂತೆ 120ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು.

ಈ ಸಂಬಂಧ ಆರೋಗ್ಯ ಇಲಾಖೆ ವರದಿ ನೀಡಿದ್ದು, ವರದಿಯು ಬಿಬಿಎಂಪಿ ವಿಶೇಷ ಆಯುಕ್ತ ಡಾ.ಕೆ.ವಿ ತ್ರಿಲೋಕ್ ಚಂದ್ರ ಅವರ ಕೈ ಸೇರಿದೆ.

ವರದಿ ಸಂಬಂಧ ಪ್ರತಿಕ್ರಿಯೆ ನೀಡಿರುವ ತ್ರಿಲೋಕ್ ಚಂದ್ರ ಅವರು, ಕಟ್ಟಡಕ್ಕೆ ನೀರು ಸರಬರಾಜು ಮಾಡುವ ಬೋರ್‌ವೆಲ್‌ನ ನೀರಿನ ಮಾದರಿಯಲ್ಲಿ ಕೊಳಚೆ ನೀರು ಸೇರಿರುವುದು ಕಂಡು ಬಂದಿದೆ. ಇದರಿಂದಲೇ ನೀರು ಕಲುಷಿತಗೊಂಡಿರುವುದಾಗಿ ತಿಳಿದುಬಂದಿದೆ. ಈ ಕೊಳಚೆ ನೀರಿನ ಕೇಂದ್ರ ಬಿಂದು ಯಾವುದು ಎಂಬುದು ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.

ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಬೋರ್‌ವೆಲ್ ಮುಚ್ಚಲು ಹಾಗೂ ಅಕ್ಕಪಕ್ಕದ ಬೋರ್‌ವೆಲ್‌ಗಳ ನೀರಿನ ಮಾದರಿಗಳನ್ನು ಪರೀಕ್ಷಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

 

Related