120 ಮಂದಿಯನ್ನು ಇರಾನ್‍ನಿಂದ ಭಾರತಕ್ಕೆ

120 ಮಂದಿಯನ್ನು ಇರಾನ್‍ನಿಂದ  ಭಾರತಕ್ಕೆ

ಜೈಪುರ ,ಮಾ.13 : ಮಹಾಮಾರಿ ಕೊರೊನಾ ವೈರಸ್ಗೆ ಇಡೀ ವಿಶ್ವವೇ ಆತಂಕಕ್ಕೀಡಾಗಿದೆ. ಅದರಲ್ಲೂ ಇರಾನ್ನಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಅಲ್ಲಿರುವ ಸುಮಾರು 120 ಮಂದಿ ಭಾರತೀಯರನ್ನು ಇಂದು ದೇಶಕ್ಕೆ ವಾಪಸ್ ಕರೆತರಲಾಗುತ್ತಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.ಏರ್ ಇಂಡಿಯಾ ವಿಮಾನದ ಮೂಲಕ ಇರಾನ್ನಲ್ಲಿ ಇರುವ 120 ಮಂದಿ ಭಾರತೀಯರನ್ನು ಇಂದು ರಾಜಸ್ಥಾನದ ಜೈಸಲ್ಮರ್ ಗೆ ಕರೆತರಲಾಗುತ್ತಿದೆ. ಅಲ್ಲದೇ ಅವರಿಗೆ ಸೇನಾ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

Related