ಯುಕೆಪಿಗೆ 10 ಸಾವಿರ ಕೋಟಿ ಘೋಷಣೆ ಅಭಿನಂದನೆ

ಯುಕೆಪಿಗೆ 10 ಸಾವಿರ ಕೋಟಿ ಘೋಷಣೆ ಅಭಿನಂದನೆ

ಬೆಂಗಳೂರು, ಮಾ. 6: ಕೃಷ್ಣ ಮೇಲ್ದಂಡೆ ಯೋಜನೆಯ 3 ನೇ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು, 20 ಹಳ್ಳಿಗಳ ಸ್ಥಳಾಂತರ, ಪುನರ್ವಸತಿ ಮತ್ತು ಪುನರ್ ನಿರ್ಮಾಣ, ಪರಿಹಾರ ನೀಡಲು ಪ್ರಸಕ್ತ 2020-21 ನೇ ಸಾಲಿನಲ್ಲಿ 10 ಸಾವಿರ ಕೋಟಿ ಗಳನ್ನು ನಿಗಧಿ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಸದನದಲ್ಲಿ  ಘೋಷಿಸಿದ್ದಾರೆ. ಮುಖ್ಯಮಂತ್ರಿಗಳಿಗೆ  ಐದೂ ಜಿಲ್ಲೆಗಳ ಸಂತ್ರಸ್ತರು, ರೈತರ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುವುದಾಗಿ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೃಷ್ಣ ಮೇಲ್ದಂಡೆ ಯೋಜನೆಯ 3 ನೇ  ಹಂತದ ಕಾಮಗಾರಿಗಳ    ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು. ಮುಂದಿನ 3 ವರ್ಷಗಳಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿಗಳು ಸದನದಲ್ಲಿ ಘೋಷಿಸಿದ್ದಾರೆ. ನೀರಾವರಿ ಇಲಾಖೆಗೆ 21 ಸಾವಿರ ಕೋಟಿ ಅನುದಾನವನ್ನು ಈ ವರ್ಷದ ಆಯವ್ಯದಲ್ಲಿ ಮಂಜೂರಾತಿಗಾಗಿ ಸದನದಲ್ಲಿ ಮಂಡಿಸಿದ್ದರು. ಕೃಷ್ಣ ಮೇಲ್ದಂಡೆ ಯೋಜನೆ ಭಾಗದ ಜನ ಪ್ರಸಕ್ತ ಆಯವ್ಯದಲ್ಲಿ ಪತ್ಯೇಕ ಅನುದಾನ ನೀಡಿಲ್ಲ ಎಂದು ಭಾವನೆ ವ್ಯಕ್ತ ಪಡಿಸಿದ್ದರು.  ಮುಖ್ಯಮಂತ್ರಿಗಳು ಇಂದು ಸದನದಲ್ಲಿ ಈ ವರ್ಷ 20-21 ನೇ ಸಾಲಿನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ 3 ನೇ ಹಂತದ ಕಾಮಗಾರಿಗಳಿಗೆ, ಪುನರ್ವಸತಿ, ಪುನರ್ ನಿರ್ಮಾಣ, ಪರಿಹಾರ, 20 ಹಳ್ಳಿಗಳ ಸ್ಥಳಾಂತಂರ ಕಾಮಗಾರಿ, ಮುಳುಗಡೆ ಭೂಮಿ ಪರಿಹಾರ ನೀಡಲು ಈ ವರ್ಷ 10 ಸಾವಿರ ಕೋಟಿ ರೂ. ನೀಡುವುದಾಗಿ ಸದನದಲ್ಲಿ ಇಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

ನ್ಯಾ ಬ್ರಿಜೇಶ್ ಕುಮಾರ್ ಅವರ ನೇತೃತ್ವದ ನ್ಯಾಯಾಧೀಕರಣದ ತೀರ್ಪಿನಂತೆ 173 ಟಿಎಂಸಿ ನೀರು ಯುಕೆಪಿಯ 3 ನೇ ಹಂತಕ್ಕೆ ಹಂಚಿಕೆಯಾಗಿದ್ದು, ಆ ನೀರನ್ನು ಬಳಕೆ ಮಾಡಲು ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಜಗಧೀಶ್ ಶೆಟ್ಟರ್ ಅವರು ಯುಕೆಪಿಯ 3 ನೇ ಹಂತದ ಕಾಮಗಾರಿಗಳಿಗೆ 17,207 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ ನೀಡಿ, ಆಡಳಿತಾತ್ಮಕ ಮಂಜೂರಾತಿಯನ್ನೂ ನೀಡಿದ್ದರೂ, ಹಿಂದಿನ ಸರ್ಕಾರಗಳು ಯುಕೆಪಿಯ 3 ನೇ ಹಂತದ ಕಾಮಗಾರಿಗಳಿಗೆ ಒಂದು ರೂಪಾಯಿ ನೀಡಲಿಲ್ಲ. ಇದರಿಂದ ಯುಕೆಪಿ ಮೂರನೇ ಹಂತದ ಕಾಮಗಾರಿಗಳಿಗೆ ಹಿನ್ನೆಡೆಯಾಗಿದೆ. 173 ಟಿಎಂಸಿ ನೀರು ಬಳಕೆ ಮಾಡಲು ಹಿನ್ನೆಡೆಯಾಗಿದೆ. ಇಂದು ವಿಶೇಷವಾಗಿ ಸಿಎಂ ಮುತುವರ್ಜಿ ವಹಿಸಿ, ಈ ವರ್ಷದಲ್ಲಿ 10 ಸಾವಿರ ಕೋಟಿ ರೂ. ಅನುದಾನ ನೀಡಿ, ಕೃಷ್ಣ ಮೇಲ್ದಂಡೆ ಯೋಜನೆಯ 3 ನೇ  ಹಂತದ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು. ಮುಂದಿನ 3 ವರ್ಷಗಳಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರ್ಕಾರ ಬದ್ದವಾಗಿದೆ ಎಂದು   ಮುಖ್ಯಮಂತ್ರಿಗಳು ಸದನದಲ್ಲೇ  ಘೋಷಿಸಿರುವುದಕ್ಕೆ ಕೃಷ್ಣ ಮೇಲ್ದಂಡೆ ಯೋಜನೆ ಭಾಗದ ಐದು ಜಿಲ್ಲೆಗಳ ಸಂತ್ರಸ್ತರು, ರೈತರು ಹಾಗೂ ಎಲ್ಲರ ಪರವಾಗಿ ಅಭಾರಿಯಾಗಿದ್ದು, ಎಲ್ಲರ ಪರವಾಗಿ ಅಭಿನಂದಿಸುವುದಾಗಿ ಶ್ರೀ ಗೋವಿಂದ ಎಂ ಕಾರಜೋಳ ತಿಳಿಸಿದರು.

Related