1 ಲಕ್ಷ ರೂ. ಸಂಭಾವನೆ ಕೇಳಿದ ಶ್ರುತಿ ಹಾಸನ್!

1 ಲಕ್ಷ ರೂ. ಸಂಭಾವನೆ ಕೇಳಿದ ಶ್ರುತಿ ಹಾಸನ್!

ಬೆಂಗಳೂರು : ‘ವಕೀಲ್ ಸಾಬ್’ ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಈ ವಿಚಾರ ಇನ್ನೂ ಅಧಿಕೃತವಾಗಿಲ್ಲ. ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ನಿರ್ದೇಶಕರು ಶ್ರುತಿ ಹಾಸನ್‌ಗೆ ಪ್ರಮುಖ ಪಾತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರತೆ. ಆದರೆ ಶ್ರುತಿ ಹಾಸನ್ ಬೇಡಿಕೆ ಇಟ್ಟಿರುವ ಸಂಭಾವನೆಯನ್ನು ಕೇಳಿ ಅಚ್ಚರಿಗೊಂಡಿದ್ದಾರೆ ಎನ್ನಲಾಗಿದೆ.

ನಟಿ ಶುತ್ರಿ ಹಾಸನ್ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ಖರ್ಚಿಗೂ ಹಣವಿಲ್ಲದಂತಾಗಿದೆ, ಮಾಡಿದ ಸಾಲ ತೀರಿಸಬೇಕಾಗಿದೆ ಎಂಬ ಮಾತನ್ನು ಸಂದರ್ಶನವೊAದರಲ್ಲಿ ಹೇಳಿಕೊಂಡಿದ್ದರು. ಈ ಹೇಳಿಕೆ ಸುದ್ದಿಯಾಗಿತ್ತು. ಇದೀಗ ಶ್ರುತಿ ಹಾಸನ್ ಸಿನಿಮಾವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಗಂಟೆಗೆ 1 ಲಕ್ಷ ರೂಪಾಯಿ ಸಂಭಾವನೆ ಕೇಳಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

ಶುತ್ರಿ ಹಾಸನ್ ದೀರ್ಘ ವಿರಾಮದ ಬಳಿಕ ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ‘ವಕೀಲ್ ಸಾಬ್‘ ಸಿನಿಮಾದ ಮೂಲಕ ಮತ್ತೆ ಬೆಳ್ಳಿ ತೆರೆಗೆ ಎಂಟ್ರಿ ನೀಡಲಿದ್ದಾರೆ. ಅಂದು ಕೊಂಡತೆ ಆಗಿದ್ದರೆ ಈ ಸಿನಿಮಾ ಮೇ ತಿಂಗಳಿನಲ್ಲಿ ತೆರೆಬರುವುದು ಖಾತ್ರಿಯಾಗಿತ್ತು. ಆದರೆ ಕೊರೋನಾ ಲಾಕ್‌ಡೌನ್‌ನಿಂದಾಗಿ ಚಿತ್ರೀಕರಣ ನಿಂತುಹೋಗಿ ಅಂದುಕೊಡ ಯೋಜನೆಗಳು ಸ್ಥಗಿತಗೊಂಡಿದೆ.

ಶ್ರುತಿ ಹಾಸನ್ 7 ದಿನಗಳ ಚಿತ್ರೀಕರಣಕ್ಕಾಗಿ ಬರೋಬ್ಬರಿ 70 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆಂದು ಕೇಳಿಬಂದಿದೆ. ಅಂದರೆ ನಿರ್ದೇಶಕರು 1 ಗಂಟೆಗೆ 1 ಲಕ್ಷ ರೂಪಾಯಿ ನೀಡಿದಂತಾಗುತ್ತದೆ. ಆದರೆ ನಿರ್ಮಾಪಕರು ನಟಿಯ ಬೇಡಿಯನ್ನು ಒಪ್ಪಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

Related