ಚಿಕನ್ ಬೋಡಾ ಬೇಕಾದ್ರೆ ಹೀಗೆ ಮಾಡಿ

ಚಿಕನ್ ಬೋಡಾ ಬೇಕಾದ್ರೆ ಹೀಗೆ ಮಾಡಿ

ಬೆಂಗಳೂರು, ಫೆ. 29 : ಸ್ಪೆಷಲ್ ಬಾಡೂಟ ಏನಾದ್ರೂ  ಪ್ಲಾನ್ ಮಾಡಿಕೊಂಡಿದ್ದರೆ ಒಮ್ಮೆ ಚಿಕನ್ ಬೋಂಡಾ ಟ್ರೈ ಮಾಡಿ.  ಪ್ರತಿದಿನ ಕೆಲಸದ ಒತ್ತಡಗಳ ನಡುವೆ ಸರಿಯಾದ ಅಡುಗೆ ಮಾಡಿಕೊಳ್ಳಲು ಸಮಯ ಸಾಕಾಗಲ್ಲ. ಪತಿ-ಪತ್ನಿ ಉದ್ಯೋಗಿಗಳಾಗಿದ್ರೆ ಮಕ್ಕಳಿಗೂ ಒಂದೇ ರೀತಿಯ ತಿಂಡಿ ತಿಂದು ಬೇಸರವಾಗಿರುತ್ತದೆ. ಒಮ್ಮೆ ತಿಂದ್ರೆ ಪದೇ ಪದೇ ಬೇಕೆನಿಸುವ ಚಿಕನ್ ಬೋಂಡಾ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

* ಮೊಳೆ ಇಲ್ಲದ ಚಿಕನ್ ಪೀಸ್ – ಅರ್ಧ ಕೆಜಿ

* ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ

* ಜೋಳದ ಹಿಟ್ಟು- ಮುಕ್ಕಾಲು ಬಟ್ಟಲು

* ಮೈದಾ ಹಿಟ್ಟು- ಅರ್ಧ ಬಟ್ಟಲು

* ಪೆಪ್ಪರ್ ಪುಡಿ – ಖಾರಕ್ಕೆ ತಕ್ಕಷ್ಟು

* ಸೋಯಾ ಸಾಸ್ – 1 ಸ್ಪೂನ್

* ಕೆಂಪು ಮೆಣಸಿನಕಾಯಿ ಪುಡಿ – 1 ಸ್ಪೂನ್

* ಎಣ್ಣೆ – ಕರಿಯಲು

 

ಮಾಡುವ ವಿಧಾನ

* ಮೊದಲಿಗೆ ಮೊಳೆ ಇಲ್ಲದ ಚಿಕನ್ ಅನ್ನು ಸಣ್ಣಗೆ ಕತ್ತರಿಸಿಕೊಂದು ಚೆನ್ನಾಗಿ ನೀರಿನಲ್ಲಿ ತೊಳೆದಿಟ್ಟುಕೊಳ್ಳಬೇಕು.

* ಬಳಿಕ ತೊಳೆದ ಚಿಕನ್ ಅನ್ನು ಒಂದು ಮಿಕ್ಸಿಂಗ್ ಬೌಲ್ಗೆ ಹಾಕಿಕೊಳ್ಳಿ.

* ಬೌಲ್ಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ಖಾರದ ಪುಡಿ, ಪೆಪ್ಪರ್ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 15ರಿಂದ 20 ನಿಮಿಷ ನೆನೆಯಲು ಬಿಡಿ.

* ಈಗ ಒಂದು ಬೌಲ್ಗೆ ಜೋಳದ ಹಿಟ್ಟು, ಮೈದಾ ಹಿಟ್ಟು, ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ನೀರು ಹಾಕಿಕೊಂಡು ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.

* ಹಿಟ್ಟು ತೀರಾ ತೆಳ್ಳಗೆ ಇರಬಾರದು. ಚಿಕನ್ ಪೀಸ್ ಅನ್ನು ಹಿಟ್ಟಿನಲ್ಲಿ ಅದ್ದಬೇಕು.

* ಈಗ ಕಾದ ಎಣ್ಣೆಗೆ ಹಿಟ್ಟಿನಲ್ಲಿ ಅದ್ದಿದ್ದ ಚಿಕನ್ ಪೀಸ್ ಅನ್ನು ಹಾಕಿ ಗೋಲ್ಡನ್ ಬ್ರೌನ್ ಆಗೋ ತನಕ ಬೇಯಿಸಿ ಸವಿಯಿರಿ.

* ಸರ್ವ್ ಮಾಡುವಾಗ ಈರುಳ್ಳಿ, ನಿಂಬೆಹಣ್ಣಿನ ಜೊತೆ ಸರ್ವ್ ಮಾಡಿದ್ರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

Related