KGF-2 ಸಿನಿಮಾದ 50ನೇ ದಿನಕ್ಕೆ, ಯಶ್ ನಟನೆಯ ಹೊಸ ಚಿತ್ರ ಅನೌನ್ಸ್?

  • In Cinema
  • May 23, 2022
  • 235 Views

ಕೆಜಿಎಫ್ 2 ಸಿನಿಮಾ ಯಶಸ್ಸಿನ ನಂತರ ಎಲ್ಲರ ಚಿತ್ರ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ನೆಟ್ಟಿದೆ. ಈಗಾಗಲೇ ನಿರ್ದೇಶಕ ಪ್ರಶಾಂತ್ ನೀಲ್ ಎರಡು ಚಿತ್ರಗಳನ್ನು ಘೋಷಿಸಿ ಆಗಿದೆ. ಈಗಾಗಲೇ ಅವರು ಸಲಾರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಈ ಸಿನಿಮಾ ಮುಗಿದ ನಂತರ ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎನ್ನುವುದು ಮೊನ್ನೆಯಷ್ಟೇ ನಿಕ್ಕಿ ಆಗಿದೆ. ಆದರೆ, ಯಶ್ ನಡೆ ಮಾತ್ರ ಭಾರೀ ಕುತೂಹಲ ಮೂಡಿಸಿದೆ.


ಕೆಜಿಎಫ್ 2 ಸಿನಿಮಾದ ನಿರ್ಮಾಪಕರು ನಾಲ್ಕು ಸಿನಿಮಾಗಳನ್ನು ಘೋಷಿಸಿದ್ದರೆ, ಪ್ರಶಾಂತ್ ನೀಲ್ ಎರಡು ಚಿತ್ರಗಳನ್ನೂ ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಅಲ್ಲದೇ, ಮತ್ತೊಂದು ಚಿತ್ರವನ್ನು ಶ್ರೀಮುರುಳಿ ಚಿತ್ರ ಮಾಡುವುದಾಗಿ ಹೇಳಿದ್ದಾರೆ. ಆದರೆ, ಯಶ್ ಮಾತ್ರ ತಮ್ಮ ಮುಂದಿನ ಸಿನಿಮಾ ಯಾರ ಜೊತೆ ಎನ್ನುವ ಗುಟ್ಟನ್ನು ಮಾತ್ರ ಇನ್ನೂ ಬಿಟ್ಟುಕೊಟ್ಟಿಲ್ಲ.

Related