ಅಬ್ಬಾ..ಬೃಹದಾಕಾರದ ಹೆಬ್ಬಾವಿನ ಜೊತೆ ಪುಟ್ಟ ಬಾಲಕನಾ ಚೆಲ್ಲಾಟ!

ಅಬ್ಬಾ..ಬೃಹದಾಕಾರದ ಹೆಬ್ಬಾವಿನ ಜೊತೆ ಪುಟ್ಟ ಬಾಲಕನಾ ಚೆಲ್ಲಾಟ!

ಸಾಮಾನ್ಯವಾಗಿ ಚಿಕ್ಕ ಮಕ್ಕಳು ತಮ್ಮ ಆಟಕ್ಕೆಂದು ಕೆಲವು ಆಟಿಕೆ ಸಾಮಾನುಗಳನ್ನು ಬಳಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಹೌದು ಪುಟ್ಟ ಮಕ್ಕಳು ಅತ್ತಾಗ ಅವರನ್ನು ಸಮಾಧಾನಪಡಿಸಲು ಸಾಮಾನ್ಯವಾಗಿ ತಂದೆ-ತಾಯಿಗಳು ಗೊಂಬೆಗಳಂತಹ ಚಿಕ್ಕ ಪುಟ್ಟ ಕಾರುಗಳನ್ನು ಆಟಿಕೆ ಸಾಮಾನುಗಳಾಗಿ ಕೊಟ್ಟು ಸಮಾಧಾನ ಪಡಿಸುತ್ತಾರೆ. ಆದರೆ ಇಲ್ಲೋಒಬ್ಬ ಪುಟ್ಟ ಬಾಲಕ ಬೃಹದಾಕಾರದ ಹೆಬ್ಬಾವನ್ನು ತನ್ನ ಆಟಿಕೆಯ ವಸ್ತುವನ್ನಾಗಿ ಬಳಸಿಕೊಂಡಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ ಹೆಬ್ಬಾವುಗಳನ್ನು ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳೆಂದು ಪರಿಗಣಿಸಲಾಗಿದೆ. ಅದರಲ್ಲೂ ಬೃಹದಾಕಾರದ ಹೆಬ್ಬಾವುಗಳು ಪ್ರಾಣಿಗಳನ್ನು ಬಿಡಿ, ಮನುಷ್ಯರನ್ನು ಸಹ ಜೀವಂತವಾಗಿ ನುಂಗಿ ಬಿಡುತ್ತವೆ. ಇದೇ ಕಾರಣಕ್ಕೆ ಈ ಹಾವುಗಳ ತಂಟೆಗೆ ಅಷ್ಟಾಗಿ ಯಾರು ಹೋಗುವುದಿಲ್ಲ.

ಆದ್ರೆ ಇಲ್ಲೊಬ್ಬ ಪುಟ್ಟ ಬಾಲಕ ಅಂತಹ ದೈತ್ಯ ಹೆಬ್ಬಾವನ್ನೇ ತನ್ನ ಆಟಿಕೆಯನ್ನಾಗಿ ಮಾಡಿಕೊಂಡಿದ್ದಾನೆ. ಎಲ್ಲಾ ಮಕ್ಕಳು ಬಸ್ಸು, ಜೆಸಿಬಿ, ಗೊಂಬೆಗಳ ಜೊತೆ ಆಟವಾಡಿದರೆ ಈ ಪುಟ್ಟ ಬಾಲಕ ಮಾತ್ರ ದೈತ್ಯ ಹೆಬ್ಬಾವನ್ನೇ ತನ್ನ ಆಟಿಕೆಯನ್ನಾಗಿ ಮಾಡಿಕೊಂಡಿದ್ದಾನೆ. ಈ ಪುಟ್ಟ ಹುಡುಗ ದೈತ್ಯ ಹೆಬ್ಬಾವಿನೊಂದಿಗೆ ಆಟವಾಡುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಹುಡುಗನ ಭಂಡ ದೈರ್ಯವನ್ನು ಕಂಡು ಎಲ್ಲರೂ ಅಚ್ಚರಿಪಟ್ಟಿದ್ದಾರೆ.

 

Related