ನಾವು ಲೋಕದ ಡೊಂಕು ತಿದ್ದುವ ಸಾಹಸಕ್ಕಿಳಿಯಲ್ಲ: ಡಿಕೆಶಿ

ನಾವು ಲೋಕದ ಡೊಂಕು ತಿದ್ದುವ ಸಾಹಸಕ್ಕಿಳಿಯಲ್ಲ: ಡಿಕೆಶಿ

ಬೆಂಗಳೂರು: ಇಂದು ನಾಡಿನಾದ್ಯಂತ ಬಸವ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಧಾನಸೌಧದ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರ ಅವರ ಪುತಳಿಗೆ ಮಾಲಾರ್ಪಣೆ ಮಾಡಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಲೈಂಗಿಕ ಟೇಪು ಮತ್ತು ಶಾಸಕ ಹೆಚ್ ಡಿ ರೇವಣ್ಣ ಅವರ ಬಂಧನಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ ಅಂತ ಹೇಳಿದಾಗ ಮಗುಳ್ನಕ್ಕ ಅವರು, ಇವತ್ತು ನಾವು ಬಸವ ಜಯಂತಿ ಆಚರಿಸುತ್ತಿದ್ದೇವೆ, ಬಸವಣ್ಣನವರು ಹೇಳಿರುವ ಮಾತೇನು? ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ ಅಂತ ಹೇಳಿದ್ದಾರೆ ಎಂದರು. ಹಾಗಾಗಿ ನಾವು ಲೋಕದ ಡೊಂಕು ತಿದ್ದುವ ಸಾಹಸಕ್ಕಿಳಿಯದೆ ನಮ್ಮ ನಮ್ಮ ಮನೆಗಳನ್ನು ನೇರಗೊಳಿಸಿಕೊಳ್ಳೋಣ ಎಂದ ಶಿವಕುಮಾರ್ ಹೇಳಿದರು.

Related