ವಿಶ್ವಕಪ್ 2023: ಇಂದು ಭಾರತ-ಬಾಂಗ್ಲಾದೇಶ ಮುಖಾಮುಖಿ

  • In Sports
  • October 19, 2023
  • 169 Views
ವಿಶ್ವಕಪ್ 2023: ಇಂದು ಭಾರತ-ಬಾಂಗ್ಲಾದೇಶ ಮುಖಾಮುಖಿ

ಪುಣೆ: ಭಾರತ ಈಗಾಗಲೇ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಅಪ್ಘಾನಿಸ್ತಾನ ಹಾಗೂ ಪಾಕಿಸ್ತಾನ ವಿರುದ್ಧ ಗೆದ್ದು ಆತ್ಮವಿಶ್ವಾಸದಲ್ಲಿ ಮುನ್ನುಗುತ್ತಿರುವ ತಂಡವಾಗಿದೆ, ಭಾರತ ಇಂದಿನ ಪಂದ್ಯವನ್ನು ಗೆದ್ದು ಮತ್ತಷ್ಟು ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ತವಕದಲ್ಲಿದೆ.

ಯಸ್..‌ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐಸಿಸಿ ವಿಶ್ವಕಪ್ 17 ನೇ ಪಂದ್ಯದಲ್ಲಿ ಏಷ್ಯಾದ ಎರಡು ಪ್ರಬಲ ತಂಡಗಳಾದ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ.

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ ಒಟ್ಟು 40 ಪಂದ್ಯಗಳಲ್ಲಿ 31 ಗೆಲುವಿನೊಂದಿಗೆ ಭಾರತ ಪ್ರಾಬಲ್ಯ ಸಾಧಿಸಿದ್ದರೆ ಮತ್ತೊಂದೆಡೆ ಬಾಂಗ್ಲಾದೇಶ 8 ಪಂದ್ಯಗಳನ್ನು ಗೆದ್ದಿದೆ.  ಭಾರತ ಗೆದ್ದಿರುವ 31 ಗೆಲುವುಗಳಲ್ಲಿ ಮೂರು ಸ್ವದೇಶ ಮತ್ತು 18 ವಿದೇಶದಲ್ಲಿ ಆಡಿರುವ ಪಂದ್ಯಗಳಾಗಿವೆ.

 

Related