ವಿಶ್ವಕಪ್‌: ನಮ್ಮ ಮೆಟ್ರೋದಿಂದ ವಿಶೇಷ ಟಿಕೆಟ್‌ ವ್ಯವಸ್ಥೆ

ವಿಶ್ವಕಪ್‌: ನಮ್ಮ ಮೆಟ್ರೋದಿಂದ ವಿಶೇಷ ಟಿಕೆಟ್‌ ವ್ಯವಸ್ಥೆ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇದೇ ಅಕ್ಟೋಬರ್ 20ರಂದು ಆಸ್ಟ್ರೇಲಿಯ ಮತ್ತು ಪಾಕಿಸ್ತಾನದ ವಿರುದ್ಧ ವಿಶ್ವ ಕಪ್ ಟೂರ್ನಿ ನಡೆಯಲಿದ್ದು ಪ್ರಯಾಣಿಕರಿಗೆ ತೊಂದರೆ ಆಗಬಾರದೆಂದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ವಿಶೇಷ ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ನಗರದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿ ಪಂದ್ಯಗಳಿಗಾಗಿ ‘ನಮ್ಮ ಮೆಟ್ರೋ’ದಿಂದ ವಿಶೇಷ ಟಿಕೆಟ್‌ ವ್ಯವಸ್ಥೆ ಮಾಡಲಾಗಿದೆ.

ಇದೇ ಅಕ್ಟೋಬರ್ 20, 26 ಹಾಗೂ ನವೆಂಬರ್ 4, 9, 12 ರಂದು ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಯ ದಿನದಂದು ರಿಟರ್ನ್ ಜರ್ನಿ ಟಿಕೆಟ್‌ಗಳನ್ನು ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಬೆಳಗ್ಗೆ 7 ರಿಂದ ಪಡೆಯಬಹುದು.

ಈ ರಿಟರ್ನ್ ಟಿಕೆಟ್ ಬೆಲೆ 50 ರೂ. ಇರಲಿದೆ. ಸಾಮಾನ್ಯ ದರದ 5% ರಿಯಾಯಿತಿ ಕೂಡ ಇರಲಿದೆ. ಈ ಟಿಕೆಟನ್ನು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆಯ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಸಂಜೆ 4 ಗಂಟೆ ನಂತರ ಒಂದು ಪ್ರಯಾಣ ಮಾಡಬಹುದಾಗಿದೆ.

ಕ್ಯೂಆರ್ ಕೋಡ್ ಟಿಕೆಟ್ ಖರೀದಿಸಿದರೆ, ಪಂದ್ಯಗಳು ನಡೆಯುವ ದಿನಗಳಂದು ಪ್ರಯಾಣಿಸಬಹುದು. ಕ್ಯೂಆರ್ ಕೋಡ್ ಟಿಕೆಟನ್ನು ವಾಟ್ಸಪ್, ನಮ್ಮ ಮೆಟ್ರೋ ಆ್ಯಪ್ ಅಥವಾ ಪೇಟಿಎಂ ಮೂಲಕ ಮುಂಗಡವಾಗಿ ಪಡೆಯಬಹುದು.

 

Related