ಚರ್ಚ್ ಫಾದರ್ ನಿಂದಲೇ ಮಹಿಳೆಗೆ ಕಿರುಕುಳ

ಚರ್ಚ್ ಫಾದರ್ ನಿಂದಲೇ ಮಹಿಳೆಗೆ ಕಿರುಕುಳ

ಕಲಬುರ್ಗಿ : ಚರ್ಚ್ ನ  ಸೆಂಟ್ ಮೇರಿ ಕ್ಯಾಥೋಡ್ರಾಲ್ ಚರ್ಚ್ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಚರ್ಚ್ ನ ಫಾದರ್ ಕ್ಲೀವನ್ ಲೈಂಗಿಕ ಕಿರುಕುಳ ನೀಡುತ್ತಿರುವ ಘಟನೆ ನಡೆದಿದೆ.

ತಮಗೆ ನ್ಯಾಯ ಕೊಡಿಸುವಂತೆ ಕಲಬುರ್ಗಿ ಕಮೀಷನರ್ ಕಚೇರಿಯಲ್ಲಿ ಆವರಣದಲ್ಲಿಯೇ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದಾಗಿ ಆರೋಪಿಸಿದ ಮಹಿಳೆಯೊಬ್ಬರು, ತಮಗೆ ನ್ಯಾಯ ಕೊಡಿಸುವಂತೆ ಪೊಲೀಸ್ ಕಮೀಷನರ್ ಕಚೇರಿಯ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ  ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಹೆಚ್ಚಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related