ರೋಹಿತ್ ಶರ್ಮಾ ವಿಶ್ವ ದಾಖಲೆ ಬರೆಯುತ್ತಾರೆ?

ರೋಹಿತ್ ಶರ್ಮಾ ವಿಶ್ವ ದಾಖಲೆ ಬರೆಯುತ್ತಾರೆ?

ಈ ಬಾರಿ ನಡೆಯುತ್ತಿರುವ ಟಿ20 ಸರಣಿಯಲ್ಲಿ ವಿಶ್ವ ದಾಖಲೆ ಸೃಷ್ಟಿಸಲು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಇನ್ನೇನು ಕೆಲವೇ ರನ್ನುಗಳ ಬಾಕಿ ಇದ್ದು, ಈ ಬಾರಿ ಟಿ20 ಸರಣಿಯಲ್ಲಿ ವಿಶ್ವ ದಾಖಲಿ ಬರೀತಾರ ಎಂದು ರೋಹಿತ್ ಶರ್ಮ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಹೌದು, ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊಸ ವಿಶ್ವ ದಾಖಲೆ ಬರೆಯಬಹುದು. ಅದು ಕೂಡ ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡದ ವರ್ಲ್ಡ್​ ರೆಕಾರ್ಡ್​ ಎಂಬುದು ವಿಶೇಷ.

ಅಂದರೆ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾವುದೇ ಬ್ಯಾಟರ್ 600 ಸಿಕ್ಸ್​ಗಳನ್ನು ಬಾರಿಸಿಲ್ಲ. ಇದೀಗ 600 ಸಿಕ್ಸರ್​ಗಳ ಸರದಾರ ಎನಿಸಿಕೊಳ್ಳಲು ರೋಹಿತ್ ಶರ್ಮಾಗೆ ಬೇಕಿರುವುದು ಬೆರಳಣಿಕೆಯ ಬಿಗ್ ಹಿಟ್​ಗಳು ಮಾತ್ರ.

ಅಫ್ಘಾನಿಸ್ತಾನ್ ವಿರುದ್ಧದ 3 ಪಂದ್ಯಗಳ ಈ ಸರಣಿಯಲ್ಲಿ ರೋಹಿತ್ ಶರ್ಮಾ 18 ಸಿಕ್ಸ್​ಗಳನ್ನು ಬಾರಿಸಿದರೆ ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಧಿಕ ಸಿಕ್ಸ್​ಗಳನ್ನು ಸಿಡಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

 

Related