ಕಿಚ್ಚ ಮತದಾನದ ದಿನ ಅಸಮಾಧಾನ ಪಟ್ಟಿದ್ಯಾಕೆ?

ಕಿಚ್ಚ ಮತದಾನದ ದಿನ ಅಸಮಾಧಾನ ಪಟ್ಟಿದ್ಯಾಕೆ?

ಬೆಂಗಳೂರು: ಎಲ್ಲರೂ ಹೊರಗಡೆ ಬಂದು ಮತ ಚಲಾಯಿಸಿ, ಮತ ಚಲಾಯಿಸಿದ್ದು ನಮ್ಮ ಮೂಲಭೂತ ಹಕ್ಕು ಎಂದು ನಟ ಕಿಚ್ಚ ಸುದೀಪ್ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.

ಇಂದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ ಕಿಚ್ಚ ಸುದೀಪ್ ಅವರು ಬೆಂಗಳೂರಿನ ಪುಟ್ಟೇನಹಳ್ಳಿಯ ಆಕ್ಸ್​ಫರ್ಡ್ ಶಾಲೆಯಲ್ಲಿ ತಮ್ಮ ಅಮೂಲ್ಯವಾದ ಮತ ಚಲಾಯಿಸಿದ್ದಾರೆ.

ಬಳಿಕ ಮಾಧ್ಯಮದ ಮಿತ್ರರೊಂದಿಗೆ ಮಾತನಾಡಿದ ಅವರು, ಯಾರು ಮತದಾನ ಮಾಡಲು ಹಿಂದೆ ಜರಿಯಬಾರದು, ನಮ್ಮ ಮತ ನಮ್ಮ ಹಕ್ಕು, ಹಾಗಾಗಿ ಎಲ್ಲರೂ ಮತಗಟ್ಟೆಗೆ ಬಂದು ತಮ್ಮ ಅಮೂಲ್ಯವಾದ ಮತ ಚಲಾಯಿಸಿದರೆ ನಮ್ಮ ನೆಚ್ಚಿನ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು

ವೋಟ್ ಹಾಕಿದವ್ರಿಗೂ ಒಳ್ಳೆಯದಾಗುತ್ತಿದೆ, ವೋಟ್ ಹಾಕದೆ ಇರುವವರಿಗೂ ಒಳ್ಳೆಯದಾಗುತ್ತಿದೆ. ಯಾರು ಬಂದು ಮತ ಹಾಕುತ್ತಾರೆ ಅವರಿಗೆ ಗೌರವ ಕೊಡೋಣ. ಎಲ್ಲರೂ ಕಡ್ಡಾಯವಾಗಿ ಮತಹಾಕಬೇಕು’ ಎಂದು ಸುದೀಪ್ ಅವರು ಮನವಿ ಮಾಡಿಕೊಂಡಿದ್ದಾರೆ. ಸುದೀಪ್ ಅವರನ್ನು ನೋಡಲು ಮತಗಟ್ಟೆಯ ಹೊರಗೆ ಅಭಿಮಾನಿಗಳು ನೆರೆದಿದ್ದರು.

 

 

Related