ಭವಾನಿಗೂ ಶುರುವಾಯ್ತು ಸಂಕಷ್ಟ..!

ಭವಾನಿಗೂ ಶುರುವಾಯ್ತು ಸಂಕಷ್ಟ..!

ಬೆಂಗಳೂರು: ಸಾವಿರಾರು ಹೆಣ್ಣುಮಕ್ಕಳ ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ಈಗಾಗಲೇ ಎಸ್ಐಟಿ ಅಧಿಕಾರಿಗಳು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರ ಮನೆ ಕೆಲಸ ಮಾಡುತ್ತಿರುವ ಮಹಿಳೆಯ ಮೇಲೆ ದೌರ್ಜನ್ಯ ವ್ಯಸಗಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದರು.

ಇನ್ನು ದೂರು ನೀಡಿದ ಸಂತ್ರಸ್ತೆಯನ್ನು ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಅಪಹರಿಸಿದ್ದಾರೆ ಎಂಬ ಆರೋಪದ ಮೇಲೆ ಈಗ ಎಚ್ ಟಿ ರೇವಣ್ಣ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಚುನಾವಣೆ ಮುಗಿದ ನಂತರ ಪ್ರಜ್ವಲ್ ಬೆಂಗಳೂರಿಗೆ ವಾಪಸ್..!?

ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಅಪಹರಿಸುವಲು ಎಚ್ ಡಿ ರೇವಣ್ಣ ಅವರ ಜೊತೆ ಅವರ ಪತ್ನಿ ಭವಾನಿ ಕೂಡ ಭಾಗಿಯಾಗಿದ್ದರೆ ಅವರಿಗೂ ಕೂಡ ಬಂಧನ ಮಾಡಲಾಗುವುದು ಎಂದು ತಿಳಿದುಬಂದಿದೆ. ಭವಾನಿ ರೇವಣ್ಣ ಕರೆಯುತ್ತಿದ್ದಾರೆ ಎಂದು ಹೇಳಿ ನನ್ನ ತಾಯಿಯನ್ನು ಸತೀಶ್‌ ಬಾಬು ಕರೆದೊಯ್ದಿದ್ದಾರೆ ಎಂದು ಸಂತ್ರಸ್ತ ಮಹಿಳೆಯ ಪುತ್ರ ದೂರು ನೀಡಿದ್ದರು.

ಲೋಕಸಭಾ ಚುನಾವಣೆಗೆ ಮೂರ್ನಾಲ್ಕು ದಿನಗಳು ಇರುವಾಗ ಪರಿಚಿತರಾದ ಸತೀಶ್ ಬಾಬು ಅವರು ನಮ್ಮ ಮನೆಗೆ ಬಂದಿದ್ದರು. ಭವಾನಿ ಅಕ್ಕ ನಿಮ್ಮನ್ನು ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ನಮ್ಮ ತಾಯಿಯನ್ನು ಜೊತೆಯಲ್ಲಿ ಹೊಳೆನರಸೀಪುರಕ್ಕೆ ಕರೆದುಕೊಂಡು ಹೋಗಿದ್ದರು. ಮತದಾನದ ದಿನದ ಬೆಳಗ್ಗೆ ಸತೀಶ್ ನನ್ನ ತಾಯಿಯನ್ನು ವಾಪಾಸ್ ಮನೆಗೆ ಕರೆದುಕೊಂಡು ಬಂದಿದ್ದರು. ಪೊಲೀಸಿನವರು ಬಂದರೆ ಅವರಿಗೆ ಏನನ್ನೂ ಹೇಳಬೇಡಿ. ಅವರಿಗೆ ಸಿಗಬೇಡಿ. ನಿಮ್ಮ ಮೇಲೆ ಕೇಸ್ ಆಗುತ್ತದೆ. ಪೊಲೀಸರು ಬಂದರೆ ನನಗೆ ತಿಳಿಸಿ ಎಂದು ತಂದೆ-ತಾಯಿ ಹೇಳಿ ಹೋಗಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭವಾನಿ ಅವರಿಗೆ ನೋಟಿಸ್‌ ಜಾರಿ ಮಾಡಿ ವಿಶೇಷ ತನಿಖಾ ತಂಡ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

Related