ನಮ್ಮಮೆಟ್ರೋ ರೈಲಿನಲ್ಲಿ ಯುವಕ-ಯವತಿಯ ಅಸಭ್ಯ ವರ್ತನೆ..!

ನಮ್ಮಮೆಟ್ರೋ ರೈಲಿನಲ್ಲಿ ಯುವಕ-ಯವತಿಯ ಅಸಭ್ಯ ವರ್ತನೆ..!

ಬೆಂಗಳೂರು: ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಲು ನಮ್ಮ ಮೆಟ್ರೋ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ ಇತ್ತೀಚಿಗೆ ನಮ್ಮ ಮೆಟ್ರೋಗಳಲ್ಲಿಅಸಭ್ಯ ವರ್ತನೆ, ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ, ಆತ್ಮಹತ್ಯೆಗೆ ಪ್ರಯತ್ನ ಚಲಿಸುತ್ತಿರುವ ರೈಲುಗಳಲ್ಲಿ ರಿಂಗ್ಸ್ ಗಳು ಮಾಡುವುದರ ಜೊತೆಗೆ ಹುಡುಗ ಹುಡುಗಿಯರು ಅಸಭ್ಯವಾಗಿ ವರ್ತಿಸುವುದು ಇತ್ತೀಚಿನ ಹೆಚ್ಚಾಗಿ ಕಂಡುಬರುತ್ತದೆ.

ಹೌದು, ಬೆಂಗಳೂರಿನಲ್ಲಿ ಚಲಿಸುತ್ತಿರುವ ನಮ್ಮ ಮೆಟ್ರೋದಲ್ಲಿ ಹುಡುಗ-ಹುಡುಗಿ ಇಬ್ಬರು ಅಸಭ್ಯವಾಗಿ ವರ್ತಿಸಿದ್ದಾರೆ. ಇದರಿಂದ ಅಕ್ಕಪಕ್ಕದಲ್ಲಿರುವ ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದಾರೆ.

ಯೆಸ್..‌ ಚಲಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಯುವಕ- ಯುವತಿ ಪರಸ್ಪರ ಬಿಗಿದಪ್ಪಿದ್ದ ವರ್ತನೆಗೆ ಸಹ ಪ್ರಯಾಣಿಕರು ಕಿಡಿಕಾರಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಸ್ಯಾಮ್‌ (Sam459om) ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ಯುವಕನನ್ನು ಒಪ್ಪಿಕೊಂಡಿದ್ದ ಯುವತಿ ಅಕ್ಷರಶಃ ಚುಂಬಿಸುತ್ತಿದ್ದಳು ಎಂದು ಬಿಎಂಆರ್‌ಸಿಎಲ್, ನಮ್ಮ ಮೆಟ್ರೋ ಹಾಗೂ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.

ಈ ವಿಡಿಯೋಗೆ ವ್ಯಾಪಕ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ನಮ್ಮ ಮೆಟ್ರೋದಲ್ಲಿ ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲ ವಯೋಮಾನದವರು ಪ್ರಯಾಣಿಸುತ್ತಾರೆ.‌ ಈ ರೀತಿಯ ನಡವಳಿಕೆಯು ಸರಿಯಲ್ಲ ಎಂದಿದ್ದಾರೆ. ಮತ್ತೆ ಕೆಲವರು ‘ಇದರಲ್ಲಿ ಅಸಭ್ಯ ವರ್ತನೆ ಏನಿದೆ. ಪರಸ್ಪರ ಅಪ್ಪಿಕೊಂಡು ನಿಂತಿದ್ದರಷ್ಟೇ. ಬೇರೆ ಯಾವುದೇ ತಪ್ಪು ಮಾಡಿಲ್ಲ’ ಎಂದಿದ್ದಾರೆ.

Related