ವಿಎಚ್‌ಪಿಯ ಪ್ರಕರಣ ತೆಗೆದು ಹಾಕುವುದಿಲ್ಲ : ಗೃಹ ಸಚಿವ

ವಿಎಚ್‌ಪಿಯ ಪ್ರಕರಣ ತೆಗೆದು ಹಾಕುವುದಿಲ್ಲ : ಗೃಹ ಸಚಿವ

ಹಾವೇರಿ : ರಾಜ್ಯದಲ್ಲಿ ಪರಿಷತ್ ಕಾರ್ಯಕರ್ತರ ಮೇಲಿನ ಎಲ್ಲ ಪ್ರಕರಣಗಳನ್ನು ತೆಗೆದು ಹಾಕುತ್ತೇನೆ ಎಂದು ನಾನು ಹೇಳಿಲ್ಲ. ವಿಎಚ್‌ಪಿ ಮುಖಂಡರು ಮನವಿ ಪತ್ರ ಕೊಟ್ಟು ಅನ್ಯಾಯ ಸರಿಪಡಿಸಿ ಎಂದು ಕೇಳಿದ್ದಾರೆ. ಯಾರಿಗೆ ಅನ್ಯಾಯವಾದರೂ ಸರಿಪಡಿಸುವ ಕೆಲಸ ನನ್ನದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದಿನ ಸರ್ಕಾರವೂ ಕೆಲವು ಸಂಘಟನೆಗಳ ಮೇಲಿನ ಪ್ರಕರಣಗಳನ್ನು ಹಿಂಪಡೆದಿದೆ. ಆದರೆ, ನಾವು ಕಾನೂನು ಪ್ರಕಾರವೇ ನ್ಯಾಯ ಒದಗಿಸುತ್ತೇವೆ ಎಂದರು.

ರಾಜ್ಯದಲ್ಲಿ ಯುಪಿ ಮಾದರಿ ಅನುಸರಿಸುತ್ತೀರಾ ಎಂಬ ಪ್ರಶ್ನೆಗೆ, ‘ಗಲಭೆಕೋರರು ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿದರೆ, ಅವರಿಂದಲೇ ನಷ್ಟದ ಪರಿಹಾರವನ್ನು ವಸೂಲಿ ಮಾಡುವಂತೆ ಈಗಾಗಲೇ ಸುಪ್ರೀಂ ಕೋರ್ಟ್ ಮಾರ್ಗಸೂಚನೆ ಕೊಟ್ಟಿದೆ.

‘ಡಿ.ಕೆ. ಶಿವಕುಮಾರ್ ಅವರಿಗೆ ಈ ನೆಲದ ಕಾನೂನು ಗೊತ್ತಿದೆ ಎಂದು ಭಾವಿಸುತ್ತೇನೆ. ಕಾನೂನು ಪ್ರಕಾರ ಗಲಭೆಯಲ್ಲಿ ಪಾಲ್ಗೊಂಡವರಿಗೆ ನೋಟಿಸ್ ಕೊಟ್ಟು, ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ನೋಟಿಸ್ ಕೊಟ್ಟು ಯಾರನ್ನೂ ಹೆದರಿಸುವ ಪ್ರಶ್ನೆಯೇ ಇಲ್ಲ’ ಎಂದು ತಿರುಗೇಟು ನೀಡಿದರು.

Related