ಹಿರಿಯ ನಟ ಶವವಾಗಿ ಪತ್ತೆ..!

  • In Crime
  • July 15, 2022
  • 278 Views
ಹಿರಿಯ ನಟ ಶವವಾಗಿ ಪತ್ತೆ..!

ಮಲಯಾಳಂನ ಖ್ಯಾತ ನಟ ಮತ್ತು ನಿರ್ದೇಶಕ ಪ್ರತಾಪ್ ಪೋಥೆನ್ ಇಂದು ಚೆನ್ನೈ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಲಯಾಳಂ ನ ಖ್ಯಾತ ನಟ ಮತ್ತು ನಿರ್ದೇಶಕ ಪ್ರತಾಪ್ ಪೋಥೆನ್ ಇಂದು ಚೆನ್ನೈ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮನೆ ಕೆಲಸಕ್ಕೆ  ಬಂದವರು ಪ್ರತಾಪ್ ಪೋಥೆನ್ ಅವರ ಮೃತ ದೇಹವನ್ನು ಬೆಡ್​ ರೂಂ ನಲ್ಲಿ ನೋಡಿ ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿಂತೆ ತನಿಖೆ ಆರಂಭಿಸಿದ್ದಾರೆ.

ಪ್ರತಾಪ್ ಪೋಥೆನ್ ಅವರ ಸಾವು ಮಲಯಾಳಂ ಚಿತ್ರರಂಗಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಗಣ್ಯರು ಹೇಳುತ್ತಿದ್ದು, ಇವರ ನಿಧನಕ್ಕೆ ಅನೇಕ ಸಿನಿ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. ಪ್ರತಾಪ್ ಪೋಥೆನ್ ಈವರೆಗೆ ಸುಮಾರು 12 ಸಿನಿಮಾಗಳನ್ನು (Movies) ನಿರ್ದೇಶನ ಮಾಡಿದ್ದಾರೆ.

ಹೌದು, ಪ್ರತಾಪ್​ ಪೋಥೆನ್ ಮೂಲತಃ ಕೇರಳದವರಾಗಿದ್ದಾರೆ. ಇವರು 100ಕ್ಕೂ ಹೆಚ್ಚು ಮಲಯಾಳಂ, ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಇವರು 12 ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. 1979ರಲ್ಲಿ ಆರವ್ಸಿನಿಮಾ ಮೂಲಕ ಪ್ರತಾಪ್​ ಪೋಥೆನ್ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿದರು. ಇದಾದ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ ಇವರಿಗೆ 1980ರಲ್ಲಿ ತೆರೆಕಂಡ ಲೋರಿ ಮತ್ತು ಚಮರಮ್ ಚಿತ್ರಗಳು ದೊಡ್ಡ ಮಟ್ಟದ ಯಶಸ್ಸನ್ನು ನೀಡಿತು.

Related