ಮುಖದ ಮೇಲಿರುವ ಮಚ್ಚೆಯನ್ನು ನಿವಾರಿಸಲು ಈ ಎಣ್ಣೆ ಬಳಸಿ!

ಮುಖದ ಮೇಲಿರುವ ಮಚ್ಚೆಯನ್ನು ನಿವಾರಿಸಲು ಈ ಎಣ್ಣೆ ಬಳಸಿ!

ಸಾಮಾನ್ಯವಾಗಿ ಎಲ್ಲರ ಮುಖದ ಮೇಲೆ ಮಚ್ಚೆ, ಕಲೆಗಳು ಇದ್ದೇ ಇರುತ್ತವೆ. ಈ ಮಚ್ಚೆ ಕಲೆಗಳಿಂದ ಮುಖದ ಅಂದವನ್ನು ಹಾಳು ಮಾಡುತ್ತದೆ.
ಹೌದು ಮುಖದಲ್ಲ ಅಡಗಿರುವ ಮಚ್ಚೆಗಳನ್ನು ಅಡಗಿಸಲು ಕೆಲವು ಮನೆಮದ್ದುಗಳನ್ನು ಉಪಯೋಗಿಸಿಕೊಂಡು ಈ ಮಚ್ಚೆಯ ಸಮಸ್ಯೆಯನ್ನು ನಾವು ನಿವಾರಿಸಿಕೊಳ್ಳಬಹುದು.
ಎಲ್ಲರಿಗೂ ಗೊತ್ತಿರುವ ಹಾಗೆ ಹರಳೆಣ್ಣೆಯನ್ನು ತಲೆಗೆ ಬಳಸುತ್ತಾರೆ. ತಲೆ ತಂಪಾಗಿರಲು ಮತ್ತು ಕೂದಲು ಸಮಸ್ಯೆಯನ್ನು ನಿವಾರಿಸಲು ಹರಳೆಣ್ಣೆಯನ್ನು ಬಯಸುತ್ತಾರೆ. ಇನ್ನು ಈ ಹರಳೆಣ್ಣೆಯನ್ನು ಉಪಯೋಗಿಸಿಕೊಂಡು ಮುಖದಲ್ಲಿರುವ ಮಚ್ಚೆಗಳನ್ನು ನಿವರಿಸಿಕೊಳ್ಳಬಹುದು.
ಮಚ್ಚೆಗಳನ್ನು ತೆಗೆದುಹಾಕಲು ಹರಳೆಣ್ಣೆಯನ್ನು ಹೇಗೆ ಬಳಸುವುದು ಎಂದು ನೋಡೋಣ.
ಬೇಕಿಂಗ್ ಸೋಡಾ ಮತ್ತು ಹರಳೆಣ್ಣೆ: ರಾತ್ರಿ 1/2 ಟೀ ಚಮಚ ಅಡುಗೆ ಸೋಡಾಕ್ಕೆ 2-3 ಹನಿ ಹರಳೆಣ್ಣೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಮಚ್ಚೆಗಳ ಮೇಲೆ ಹಚ್ಚಿ ಮತ್ತು ಬ್ಯಾಂಡೇಜ್ ಗಳಿಂದ ಮುಚ್ಚಿ. ಮರುದಿನ ಬೆಳಿಗ್ಗೆ ಬ್ಯಾಂಡೇಜ್ ತೆಗೆದು ಮುಖ ತೊಳೆಯಿರಿ. ಒಂದು ದಿನ ಬಿಟ್ಟು ಈ ವಿಧಾನವನ್ನು ಅನುಸರಿಸಿ.
ಜೇನುತುಪ್ಪ ಮತ್ತು ಹರಳೆಣ್ಣೆ: 1 ಟೀ ಚಮಚ ಜೇನುತುಪ್ಪವನ್ನು ತೆಗೆದುಕೊಂಡು ಅದಕ್ಕೆ 2-3 ಹನಿ ಹರಳೆಣ್ಣೆಯನ್ನು ಸೇರಿಸಿ ಮತ್ತು ನಂತರ ಅದನ್ನು ಹಚ್ಚಿ. ನಂತರ ಅದನ್ನು ಬ್ಯಾಂಡೇಜ್ ನಿಂದ ಮುಚ್ಚಿ ಕೆಲವು ಗಂಟೆಗಳ ನಂತರ ತೆಗೆಯಿರಿ. ಈಗ ಮುಖವನ್ನು ತೊಳೆಯಬೇಕು. ಈ ವಿಧಾನವನ್ನು ದಿನಕ್ಕೆಎರಡು ಬಾರಿ ಬಳಸಿ. 7-10 ದಿನಗಳಲ್ಲಿ ಫಲಿತಾಂಶಗಳನ್ನು ನೋಡುತ್ತೀರಿ.
ಶುಂಠಿ ಮತ್ತು ಹರಳೆಣ್ಣೆ: ಅರ್ಧ ಟೀ ಚಮಚ ಶುಂಠಿ ಪುಡಿಗೆ 2-3 ಹನಿ ಹರಳೆಣ್ಣೆಯನ್ನು ಸೇರಿಸಿ. ಈಗ ಈ ಪೇಸ್ಟ್ ಅನ್ನು ಮಚ್ಚೆ ಮೇಲೆ ಹಚ್ಚಿ ಮತ್ತು ಕೆಲವು ಗಂಟೆಗಳ ಕಾಲ ಬಿಡಿ. ನಂತರ ಮುಖವನ್ನು ತೊಳೆಯಿರಿ. ದಿನಕ್ಕೆ ಎರಡು ಬಾರಿ ಬಳಸುವುದರಿಂದ ಉತ್ತಮ ಫಲಿತಾಂಶ ಬರುತ್ತದೆ.

Related