ಎರಡು ಲಾರಿ ಮುಖಾಮುಖಿ ಡಿಕ್ಕಿ

ಎರಡು ಲಾರಿ ಮುಖಾಮುಖಿ ಡಿಕ್ಕಿ

ಬಳ್ಳಾರಿ : ಕೂಡ್ಲಿಗಿ ತಾಲೂಕಿನ ಬಣವಿಕಲ್ ಬಳಿ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಎರಡು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಚಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಲಾರಿ ಚಾಲಕ ಚಿನ್ನ (28) ಮೃತ ದುರ್ದೈವಿ. ಚಿನ್ನ ಚಾಲನೆ ಮಾಡುತ್ತಿದ್ದ ಲಾರಿಯಲ್ಲಿ ಕುಳಿತ್ತಿದ್ದ ಡೇವಿಡ್, ರಫೀಕ್ ಬಾಷ, ಪೀಟರ್, ಹೇಮಂತ್ ಕುಮಾರ್ ಎಂಬುವರು ಗಾಯಗೊಂಡಿದ್ದಾರೆ. ಎರಡೂ ಲಾರಿಗಳ ಮುಂಭಾಗ ನಜ್ಜುಗುಜ್ಜಾಗಿದ್ದು, ಲಾರಿಯ ಅವಶೇಷಗಳು ಬೆಚ್ಚಿಬೀಳಿಸುವಂತಿದೆ.

ಮತ್ತೊಂದು ಲಾರಿಯ ಚಾಲಕ ಪರಮಾನಂದ ಅಜಾಗರೂಕತೆಯಿಂದ ಲಾರಿ ಡ್ರೈವ್ ಮಾಡಿಕೊಂಡು ಬಂದದ್ದೇ ಅಪಘಾತಕ್ಕೆ ಕಾರಣವಾಗಿದೆ. ಪರಮಾನಂದ ಕೂಡ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕೂಡ್ಲಿಗಿ ತಾಲೂಕಿ ಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related