IPL2024: ಇದು ಧೋನಿಯ ಕೊನೇ IPL..?!

IPL2024: ಇದು ಧೋನಿಯ ಕೊನೇ IPL..?!

ಚೆನ್ನೈ: ಇಂದಿನಿಂದ 17 ನೆಯ ಆವೃತ್ತಿಯ ಐಪಿಎಲ್ ಪಂದ್ಯಾವಳಿ ಪ್ರಾರಂಭವಾಗಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಇಂದಿನಿಂದ ಎರಡು ತಿಂಗಳಗಳ ಕಾಲ ಕ್ರಿಕೆಟ್ ರಸದೌತಣ ಸಿಗಲಿದೆ.

ಇಂದು ಚೆನ್ನೈ ಸೂಪರ್ ಕಿಂಗ್ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ಮುಖಾಮುಖಿಯಾಗಲಿದ್ದು, ಚೆನ್ನೈನ ಚಿದಂಬರಂ ಚೆಪಾಕ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ರೋಚಕ ಪಂದ್ಯಾವಳಿಗಳು ನಡೆಯಲಿದ್ದು ಇದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನು ಚೆನ್ನೈನಲ್ಲಿ ಐಪಿಎಲ್ ಪಂದ್ಯಾವಳಿಯು ಬಾರಿ ಅದ್ದೂರಿ ಸಮಾರಂಭದಿಂದ ಪ್ರಾರಂಭವಾಗಲಿದೆ.

5 ಬಾರಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ 3 ಬಾರಿ ರನ್ನರ್‌ ಅಪ್‌ ಪ್ರಶಸ್ತಿ ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.

ಧೋನಿಗೆ ಇದು ಕೊನೇ ಐಪಿಎಲ್‌?

2023ರ ಟೂರ್ನಿ ಆರಂಭದಿಂದಲ್ಲೇ ನಿವೃತ್ತಿಯ ಸುಳಿವು ನೀಡಿದ್ದ ಎಂ.ಎಸ್‌ಧೋನಿ ಅವರಿಗೆ 17ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಕೊನೇ ಲೀಗ್‌ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ ಮಹಿ ಆಪ್ತರು ಇನ್ನೂ ಎರಡು ಸೀಸನ್‌ ಆಡಬಹುದು ಎಂದು ಸುಳಿವು ಕೊಟ್ಟಿದ್ದಾರೆ. ಈ ನಡುವೆ ಆಸೀಸ್‌ ಬ್ಯಾಟರ್‌ ಡೇವಿಡ್‌ ವಾರ್ನರ್‌, ಭಾರತದ ಅಮಿತ್‌ ಮಿಶ್ರಾ, ಶಿಖರ್‌ ಧವನ್‌, ಪಿಯೂಶ್‌ ಚಾವ್ಲಾ ಅವರಿಗೂ ಇದು ಕೊನೆಯ ಟೂರ್ನಿ ಆಗಲಿದೆ ಎಂದು ಮೂಲಗಳು ತಿಳಿಸಿವೆ.

Related