ಈಗಾಗಲೇ ನಿಗಮ ಮಂಡಳಿಯ ಪಟ್ಟಿಯನ್ನು ಹೈಕಮಾಂಡ್ ಗೆ ಕಳಿಸಲಾಗಿದೆ: ಸಿಎಂ

ಈಗಾಗಲೇ ನಿಗಮ ಮಂಡಳಿಯ ಪಟ್ಟಿಯನ್ನು ಹೈಕಮಾಂಡ್ ಗೆ ಕಳಿಸಲಾಗಿದೆ: ಸಿಎಂ

ಬೆಂಗಳೂರು; ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕ ಮತ್ತು ಸಚಿವರ ಖಾತೆ ಹಂಚಿಕೆಗಳ ವಿಷಯದಲ್ಲಿ ಅಸಮಾಧಾನ ಉಂಟಾಗಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರು ಅಸಮಾಧಾನ ಪಡುವ ಅವಶ್ಯಕತೆ ಇಲ್ಲ ಈಗಾಗಲೇ ಕೆಲವು ಶಾಸಕರಿಗೆ ನಿಗಮ ಮಂಡಳಿಯ ಜವಾಬ್ದಾರಿಯನ್ನು ನೀಡಲು ಮುಂದಾಗಿದೆ ಎಂದು ಹೇಳಿದ್ದಾರೆ.

ಇನ್ನು ಇದರ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೊದಲು ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷಗಿರಿಯನ್ನು ನೀಡುತ್ತೇವೆ ನಂತರ ಪಟ್ಟಿಯಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗವು ಎಂದು ಹೇಳಿದ್ದಾರೆ

ನಿಗಮ ಮಂಡಳಿ ನೇಮಕದ ಪಟ್ಟಿಯನ್ನು ಹೈಕಮಾಂಡ್​ಗೆ ಕಳುಹಿಸಿದ್ದೇವೆ.‌ ಹೈಕಮಾಂಡ್ ಒಪ್ಪಿಗೆ ಕೊಡಬೇಕು ಎಂದರು. ಮೊದಲು ಶಾಸಕರಿಗೆ ನಿಗಮ ಮಂಡಳಿ‌ ನೇಮಕಾತಿಯಲ್ಲಿ ಅವಕಾಶ ನೀಡುತ್ತೇವೆ. ಎರಡು, ಮೂರನೇ ಹಂತದಲ್ಲಿ ಕಾರ್ಯಕರ್ತರಿಗೆ ನೀಡುತ್ತೇವೆ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು. ಬಿ. ಆರ್ ಪಾಟೀಲ್ ಪತ್ರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು ಇನ್ನೂ ಪತ್ರ ನೋಡಿಲ್ಲ. ನನಗೆ ಪತ್ರ ಇನ್ನೂ ತಲುಪಿಲ್ಲ. ಅವರು ಏನು ಬರೆದಿದ್ದಾರೆ ಅಂತ ನೋಡ್ತೇನೆ ಎಂದು ತಿಳಿಸಿದರು.

ನಿಗಮ ಮಂಡಳಿಗಳ ನೇಮಕಾತಿಯನ್ನು ಮೂರು ನಾಲ್ಕು ಹಂತಗಳಲ್ಲಿ ಮಾಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದರು. ನಿಗಮ‌ ಮಂಡಳಿ ನೇಮಕಾತಿ, ಸಮಿತಿಗಳ ರಚನೆ, ಗ್ಯಾರಂಟಿಗಳ ಅನುಷ್ಠಾನದ ವಿಚಾರವನ್ನು ಒಂದೊಂದಾಗಿ ಬಗೆಹರಿಸಲಿದ್ದೇವೆ ಎಂದು ತಿಳಿಸಿದರು.

 

Related