2024ನೇ ಸಾಲಿನ ಮೊದಲನೇ ಚಂದ್ರಗ್ರಹಣ

2024ನೇ ಸಾಲಿನ ಮೊದಲನೇ ಚಂದ್ರಗ್ರಹಣ

ಬೆಂಗಳೂರು: 2024ನೆಯ ಸಾಲಿನ ಮೊದಲನೆಯ ಚಂದ್ರ ಗ್ರಹಣ ಇಂದು ಸಂಭವಿಸಲಿದ್ದು ಎಲ್ಲ ವಿಜ್ಞಾನಿಗಳು ಈ ಚಂದ್ರ ಗ್ರಹಣಕ್ಕಾಗಿ ಕಾಯುತ್ತಿದ್ದರೆ.

ಇಂದು ಸಂಭವಿಸಲಿರುವ ಗ್ರಹಣವು ಪೆನಂಬ್ರಲ್ (ತೀವ್ರವಲ್ಲದ ಅಥವಾ ಭಾಗಶಃ) ಚಂದ್ರಗ್ರಹಣವಾಗಿರುತ್ತದೆ, ಇಲ್ಲಿ ಚಂದ್ರನು ಭೂಮಿಯ ಪೆನಂಬ್ರಾಲ್ ನೆರಳಿನ ಮೂಲಕ ಹಾದುಹೋಗುತ್ತದೆ. ಈ ಗ್ರಹಣವು ಪೆನಂಬ್ರಲ್ ಆಗಿರುವುದರಂದ ಅದು ಚಂದ್ರನ ಅತ್ಯಂತ ಸೂಕ್ಷ್ಮವಾದ ನೆರಳು ಮತ್ತು ಬರಿಗಣ್ಣಿಗೆ ಗೋಚರಿಸದಿರಬಹುದು.

ಗ್ರಹಣವು ಮಾರ್ಚ್ 25 ರಂದು ಬೆಳಗ್ಗೆ 10:24 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3:01 ಕ್ಕೆ ಕೊನೆಗೊಳ್ಳಲಿದೆ.

ಅಮೆರಿಕ, ಜಪಾನ್, ರಷ್ಯಾ, ಐರ್ಲೆಂಡ್, ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್, ಇಟಲಿ, ಜರ್ಮನಿ, ಫ್ರಾನ್ಸ್, ಹಾಲೆಂಡ್, ಬೆಲ್ಜಿಯಂ, ದಕ್ಷಿಣ ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ನಲ್ಲಿ ಈ ಚಂದ್ರಗ್ರಹಣ ಗೋಚರಿಸಲಿದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಈಗಾಗಲೇ ಹೇಳಿದಂತೆ, 2024 ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಮೊದಲ ಚಂದ್ರಗ್ರಹಣ ಇಂದು ಸಂಭವಿಸಲಿದೆ.

 

 

Related