ಸೆ.೧೫ ರೊಳಗೆ ಪಠ್ಯಪುಸ್ತಕ ಪೂರೈಕೆ

ಸೆ.೧೫ ರೊಳಗೆ ಪಠ್ಯಪುಸ್ತಕ ಪೂರೈಕೆ

ಬೆಂಗಳೂರು: ಸೆಪ್ಟೆಂಬರ್ ೧೫ ರೊಳಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಪಠ್ಯಪುಸ್ತಕ ಒದಗಿಸುವ ಗುರಿ ಹೊಂದಿದ್ದೇವೆಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಕೋವಿಡ್ ಹಿನ್ನೆಲೆ, ಮುದ್ರಣಾಲಯಗಳು ಮುದ್ರಣ ಸ್ಥಗಿತಗೊಂಡಿದ್ದರಿಂದ ಮುದ್ರಣ ಪ್ರಕ್ರಿಯೆ ವಿಳಂಬವಾಗಿದೆ. ಆದರೂ ಇದುವರೆಗೂ ಶೇಕಡಾ ೭೦ ಕ್ಕಿಂತ ಹೆಚ್ಚು ಪಠ್ಯಪುಸ್ತಕಗಳು ಮುದ್ರಣಗೊಂಡಿದ್ದು, ಶೇಕಡಾ ೫೦ ಕ್ಕಿಂತ ಹೆಚ್ಚು ಶಾಲೆಗಳಿಗೆ ಪೂರೈಕೆಯಾಗಿದೆ. ಸೆಪ್ಟೆಂಬರ್ ೧೫ ರೊಳಗೆ ಎಲ್ಲಾ ಶಾಲೆಗಳಿಗೆ ಪಠ್ಯ ಪುಸ್ತಕ ಒದಗಿಸಲಾಗುತ್ತೆ. ಆನ್‌ಲೈನಲ್ಲಿಯೂ ಪಠ್ಯಪುಸ್ತಕವನ್ನು ಅಪ್‌ಲೋಡ್ ಮಾಡಲಾಗಿದ್ದು, ಡೌನ್‌ಲೋಡ್ ಮಾಡಿ ವಿದ್ಯಾರ್ಥಿಗಳಿಗೆ ಹಂಚುವಂತೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

Related