ಸಹಾಯಕ್ಕಾಗಿ ಅಂಗಲಾಚಿ ಕಣ್ಣೀರು ಹಾಕಿದ ವೃದ್ದೆ

ಸಹಾಯಕ್ಕಾಗಿ ಅಂಗಲಾಚಿ ಕಣ್ಣೀರು ಹಾಕಿದ ವೃದ್ದೆ

ಯಾದಗಿರಿ : ದೀಪಾವಳಿ ಹಬ್ಬದ ಹಿನ್ನಲೆ ಹಣತೆಗಳನ್ನು ಸಿದ್ದ ಮಾಡಿದ್ದ ಕುಂಬಾರರ ಬದುಕು ಈಗ ಬೀದಿಪಾಲಾಗಿದೆ. ಕುಂಬಾರರು ಈಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ವಾಸವಾಗಿರುವ 6 ಜನ ಕುಂಬಾರ ಕುಟುಂಬವು ಈಗ ಕಣ್ಣೀರು ಹಾಕುತ್ತಿದೆ.
ಭೀಮಾನದಿ ಪ್ರವಾಹ ಹಿನ್ನಲೆ ಭೀಮಾನದಿ ಹಿನ್ನಿರು ಗ್ರಾಮಕ್ಕೆ ನುಗ್ಗಿದ್ದವು. ಈ ಹಿನ್ನಲೆ ಮನೆಯಲ್ಲಿರುವ ದವಸ ಧಾನ್ಯ ಹಾಗೂ ಹಣತೆಗಳು ಕೂಡ ಹಾನಿಯಾಗಿವೆ. ಅದೇ ರೀತಿ ಮಡಕೆ ಮಾಡುವ ಬಟ್ಟಿಗೆ ಹಾನಿಯಾಗಿದೆ. ದೀಪಾವಳಿ ಹಿನ್ನಲೆ ಹಣತೆಗಳನ್ನು ಮಾಡಿದ್ದೆವು. ಹಣತೆಗಳು, ಮಡಕೆಗಳು ಕೂಡ ಹೋಗಿವೆ. ನಾವು ಹೇಗೆ ಬದುಕು ಸಾಗಿಸಬೇಕೆಂದು ನೋವು ತೊಡಿಕೊಂಡರು.

ಹಣತೆ ಮಾಡಿ ಬದುಕು ನಡೆಸುತ್ತಿದ್ದಳು. ವೃದ್ದೆಗೆ ವಿಧವಾ ವೇತನ ಕೂಡ ಬಂದಿಲ್ಲ. ನಮ್ಮ ಗೋಳು ಯಾರು ಕೇಳಲು ಬಂದಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ.
ವೃದ್ದೆ ಮಹಾದೇವಮ್ಮ ಪ್ರಜಾವಾಹಿನಿಯೊಂದಿಗೆ ಮಾತನಾಡಿ, ನನಗೆ ನನ್ನ ಮಗ ಮನೆಯಿಂದ ಹೊರ ಹಾಕಿದ. ನಾನು ಪಣತೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದೆ. ಈಗ ನೀರಿನಲ್ಲಿ ಕೊಚ್ಚಿ ಹೋಗಿವೆ. ಯಾರಾದರೂ ನನಗೆ ಸಹಾಯ ಮಾಡಿ ಎಂದು ಕಣ್ಣೀರು ಹಾಕಿದ್ದಾಳೆ.ಸದ್ಯಕ್ಕೆ ಪ್ರವಾಹ ತಗ್ಗಿದರೂ ಜನರ ನೆಮ್ಮದಿ ಮಾತ್ರ ತಪ್ಪಿಲ್ಲ.ಅಧಿಕಾರಿಗಳು ಭೇಟಿ ನೀಡಿ ಕುಂಬಾರರಿಗೆ ಆಶ್ರಯವಾಗಬೇಕಿದೆ.

Related