ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ

ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ

ಧಾರವಾಡ, ಫೆ. 22: ಗ್ರಾಮೀಣ ಗಳಲ್ಲಿ ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಾರೆ ಅದರಲ್ಲೂ ಗ್ರಾಮೀಣ ಕ್ರೀಡೆ ಎಂದರೆ ಕಬಡ್ಡಿ ಕೋಕೋ ಚಿನ್ನಿದಾಂಡು ಇತರ ಕ್ರೀಡೆಗಳು ಹಾಗೂ ಎಲ್ಲರ ಮನಸಲ್ಲಿ ಕುತೂಹಲ ಮೂಡಿಸುವ ಕ್ರೀಡೆ ಎಂದರೆ ಅದು ಕುಸ್ತಿ.

ಹೌದು, ಈ ಗ್ರಾಮೀಣ ಕ್ರೀಡೆಗಳಲ್ಲಿ ಒಂದಲ್ಲ ಒಂದು ವಿಶೇಷತೆ ಇದ್ದೆ ಇರುತ್ತದೆ. ಅದರಂತೆ ಕುಸ್ತಿಯಲ್ಲಿಯೂ ಸಹ ಕರ್ನಾಟಕದಲ್ಲಿ ತನ್ನದೇಯಾದ  ವಿಶಿಷ್ಟತೆಯನ್ನು ಹೊಂದಿದೆ. ಕುಸ್ತಿಪಟುಗಳು ಅಖಾಡಕ್ಕೆ ಇಳಿದ್ರೆ ಸಾಕು ಎದುರಾಳಿಯನ್ನ ಮಣ್ಣುಮುಕ್ಕಿಸಿ ಗೆಲುವಿನ ನಗೆ ಬಿರುತ್ತಾರೆ. ಈ ಅಖಾಡದಲ್ಲಿ ಸೆಣಸಾಟ ನೋಡುವುದೆ ರೊಮಾಂಚನ.

ಕರ್ನಾಟಕ ಕುಸ್ತಿ ಹಬ್ಬದ ಪ್ರಯುಕ್ತ ಇಂದಿಮನಿಂದ ಧಾರವಾಡದಲ್ಲಿ 4 ದಿನಗಳ ಕುಸ್ತಿ ಪಂದ್ಯಾ ವಳಿಯನ್ನು ಆಯೋಜಿಸಲಾಗಿದೆ. ಈ ಕುಸ್ತಿ ಹಬ್ಬಕ್ಕೆ ರಾಜ್ಯ ಸರಕಾರ 2 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಇಂದಿನಿಂದ  4 ದಿನಗಳ ಕಾಲ ನಡೆಯಲಿರುವ ಈ ಹಬ್ಬದಲ್ಲಿ ಒಟ್ಟು 2 ಸಾವಿರ ಜನ ಪೈಲ್ವಾನರು ಭಾಗವಹಿಸಲಿದ್ದಾರೆ. ಕಳೆದ ವರ್ಷಈ ಹಬ್ಬ ಬೆಳಗಾವಿಯಲ್ಲಿ ನಡೆದಿತ್ತು. ಈ ಬಾರಿ ಧಾರವಾಡಕ್ಕೆ ಆತಿಥ್ಯದ ಅವಕಾಶ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪೈಲ್ವಾನ ಸಂಘದವರಿಗೆ ಕುಸ್ತಿ ಕಣವನ್ನು ತಯಾರು ಮಾಡುವ ಜವಾಬ್ದಾರಿಯನ್ನು ಜಿಲ್ಲಾಡಳಿತ ವಹಿಸಿಕೊಟ್ಟಿದೆ.

ಒಟ್ಟು ಮೂರು ಕಣಗಳಲ್ಲಿ ಕುಸ್ತಿ ಪಂದ್ಯಗಳು ನಡೆಯಲಿದ್ದು, ಕಣವನ್ನು ಸಾಂಪ್ರದಾಯಿಕವಾಗಿ ಸಿದ್ಧಗೊಳಿಸಲಾಗಿದೆ. ಒಂದೊಂದು ಕಣಕ್ಕೆ ಒಂದು ಕ್ವಿಂಟಾಲ್ ಸಾಸಿವೆ ಎಣ್ಣೆ, ಒಂದು ಕ್ವಿಂಟಾಲ್ ಅರಿಸಿಣ ಪುಡಿ, ಹತ್ತು ಕೆ.ಜಿ ಕರ್ಪೂರ, ಒಂದು ಸಾವಿರ ನಿಂಬೆ ಹಣ್ಣು, ಐದು ನೂರು ಲೀಟರ್ ಮಜ್ಜಿಗೆ ಬಳಸಿ ಕಣವನ್ನು ಸಿದ್ಧಗೊಳಿಸಲಾಗಿದೆ.

ಒಟ್ಟು ನಾಲ್ಕು ದಿನಗಳ ಕಾಲ ಆರು ವಿಭಾಗಗಳಲ್ಲಿ ಕುಸ್ತಿ ಪಂದ್ಯಗಳು ನಡೆಯಲಿವೆ. ಅಂತಿಮ ಸುತ್ತಿನಲ್ಲಿ ಗೆದ್ದವರಿಗೆ ಬಾಲ ಕೇಸರಿ, ಕರ್ನಾಟಕ ಕೇಸರಿ ಮತ್ತು ಮಹಿಳಾ ಕುಸ್ತಿ ಪಟುಗಳಿಗೆ ಮಹಿಳಾ ಕರ್ನಾಟಕ ಕೇಸರಿ ಬಿರುದು ನೀಡಿ ಸನ್ಮಾನಿಸಲಾಗುವುದು. ಅಲ್ಲದೆ, ಇದರ ಜೊತೆಗೆ ವಿಜಯಶಾಲಿಗಳಿಗೆ ಒಟ್ಟು 80 ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಲಾಗುತ್ತಿರುವುದು ಮತ್ತೊಂದು ವಿಶೇಷ.

Related