ಶೀಘ್ರದಲ್ಲೇ ಕೆಎಸ್ಆರ್ಟಿಸಿಯ ಮತ್ತೊಂದು ಸೇವೆ ಆರಂಭ

ಶೀಘ್ರದಲ್ಲೇ ಕೆಎಸ್ಆರ್ಟಿಸಿಯ ಮತ್ತೊಂದು ಸೇವೆ ಆರಂಭ

ಬೆಂಗಳೂರು; ಕರ್ನಾಟಕ ರಸ್ತೆ ಸಾರಿಗೆ ನಿಗಮ ಈಗಾಗಲೇ ಹಲವಾರು ಸೇವೆಗಳನ್ನು ಕಲ್ಪಿಸಿದ್ದು ಮತ್ತೆ ಕರ್ನಾಟಕ ಜನತೆಗೆ ಶೀಘ್ರದಲ್ಲೇ ಎಸ್‌ಆರ್‌ಟಿಸಿ ಸಾರಿಗೆಯೇತರ ಆದಾಯ ಅಭಿವೃದ್ಧಿಗೊಳಿಸಿಕೊಳ್ಳಲು ಮುಂದಾಗಿದೆ.

ಹೌದು ಡಿಸೆಂಬರ್ 15ರೊಳಗೆ ಕೆಎಸ್‌ಆರ್‌ಟಿಸಿಯ ಕಾರ್ಗೋ ಸೇವೆಯನ್ನು ಆರಂಭ ಮಾಡಲು ಮುಂದಾಗಿದೆ. ಪಾರ್ಸೆಲ್‍ಗಳನ್ನು ಒಂದು ನಗರದಿಂದ ಮತ್ತೊಂದು ನಗರಕ್ಕೆ ಸಾಗಾಣಿಕೆ ಮಾಡುವ ಕಾರ್ಗೋ ಸೇವೆಗಾಗಿ 20 ಲಾರಿ ಟ್ರಕ್‍ಗಳನ್ನು ಖರೀದಿಸಿದ್ದು, ಸದ್ಯದಲ್ಲಿ ಅಧಿಕೃತ ಚಾಲನೆ ನೀಡಲಿದೆ.

ಬಸ್ ಸೇವೆಯಲ್ಲಿ ಪ್ರಯಾಣಿಕರ ವಿಶ್ವಾಸಕ್ಕೆ ಪಾತ್ರವಾಗಿರುವ ಕೆಎಸ್‌ಆರ್‌ಟಿಸಿಯು ಪ್ರಥಮ ಬಾರಿಗೆ ಟ್ರಕ್‍ಗಳ ಮೂಲಕ ಪಾರ್ಸೆಲ್ ಸೇವೆಗೆ ಮುಂದಾಗಿದೆ. ಕಾರ್ಗೋ ಪಾರ್ಸೆಲ್ ಸೇವೆಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆಯಲ್ಲಿ ಕೆಎಸ್‍ಆರ್‍ಟಿಸಿ ಇದೆ.

 

Related