ಶಿವಣ್ಣನ ಫಿಟ್ನೆಸ್ ಸೀಕ್ರೆಟ್ ಏನ್ ಗೊತ್ತಾ..?

ಶಿವಣ್ಣನ ಫಿಟ್ನೆಸ್ ಸೀಕ್ರೆಟ್ ಏನ್ ಗೊತ್ತಾ..?

ಆನಂದ್ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟ ಶಿವಣ್ಣ 1986 ರಿಂದ ಇಲ್ಲಿಯವರೆಗೆ ಸುಮಾರು 120ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆ ಮಾತ್ರವಲ್ಲದೆ ನಿರ್ಮಾಪಕರಾಗಿ, ನಿರೂಪಕರಾಗಿ, ಹಿನ್ನೆಲೆ ಗಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ. ಆದ್ರೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ವಯಸ್ಸು 55 ದಾಟಿದರೂ ಸಹ ಇನ್ನು ಯಂಗ್ ಸ್ಟಾರ್ ರೀತಿ ಹೆಜ್ಜೆ ಹಾಕ್ತಾರೆ. ಈಗಲೂ ಡ್ಯಾನ್ಸ್ ಅಂದ್ರೆ ಸಾಕು ಕುಣಿದು ಕುಪ್ಪಳಿಸುತ್ತಾರೆ.

ಸದ್ಯ ಶಿವಣ್ಣ ಶೂಟಿಂಗ್ ಇರ್ಲಿ ಬಿಡಲಿ ತಮ್ಮ ಫಿಟ್ನೆಸ್ ಮಾತ್ರ ಬಿಡೋದಿಲ್ಲ. ಅಷ್ಟರ ಮಟ್ಟಿಗೆ ಜನರ ಮನದಲ್ಲಿ ಹಾಗೇ ಉಳಿಕೊಂಡಿದ್ದಾರೆ. ಆದ್ರೆ ಶಿವಣ್ಣ ಈ ವಯಸ್ಸಿನಲ್ಲೂ ಈ ಮಟ್ಟಿಗೆ ತಮ್ಮ ಎನರ್ಜಿ ಹಾಗೂ ಫಿಟ್ನೆಸ್ ಏನು ಅನ್ನೋದು ಅವರ ಶಿವಣ್ಣನ ಅಭಿಮಾನಿಗಳ ಪ್ರಶ್ನೆ.

ಸದ್ಯ ಶಿವಣ್ಣ ದಿನ ನಿತ್ಯ ವ್ಯಾಯಮ ಮಾಡ್ತಾರೆ. ಸದ್ಯ ವ್ಯಾಯಾಮವೇ ಅವರ ಆರೋಗ್ಯದ ಗುಟ್ಟು.ಈ ಲಾಕ್ಡೌನ್ನಲ್ಲೂ ಮನೆಯಲ್ಲೇ ವ್ಯಾಯಾಮ ಮಾಡುತ್ತಿರುವ ಶಿವಣ್ಣ ಅವರ ಮನೆಯಂಗಳದಲ್ಲಿ ಸೈಕಲ್ ತುಳಿಯುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

At home today and everyday #stayhomestaysafe

A post shared by DrShivaRajkumar (@nimmashivarajkumar) on

ಇತ್ತೀಚೆಗೆ ಶಿವರಾಜ್ ಕುಮಾರ್ ಲಂಡನ್ನಲ್ಲಿ ಭುಜದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಅಲ್ಲಿಂದ ಬಂದ ನಂತರ ಕೆಲ ಸಮಯ ವಿಶ್ರಾಂತಿ ತೆಗೆದುಕೊಂಡ ಶಿವಣ್ಣ ಮತ್ತೆ ಡ್ಯಾನ್ಸ್ ಹಾಗೂ ವ್ಯಾಯಾಮವನ್ನ ಶುರುಮಾಡಿದ್ದಾರೆ.

Related