ದಾವಣಗೆರೆ; ಕಾಂಗ್ರೆಸ್ಸಿನ ಹಿರಿಯ ಶಾಸಕ ಮತ್ತು ಸಚಿವರಿಗೆ ಸಂಕಷ್ಟ!

ದಾವಣಗೆರೆ; ಕಾಂಗ್ರೆಸ್ಸಿನ ಹಿರಿಯ ಶಾಸಕ ಮತ್ತು ಸಚಿವರಿಗೆ ಸಂಕಷ್ಟ!

ದಾವಣಗೆರೆ: ಚುನಾವಣೆ ಬಂತಂದರೆ ಸಾಕು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಒಂದಲ್ಲ ಒಂದು ರೀತಿ ಕಸರತ್ತು ಮಾಡುತ್ತಾರೆ.

ಹೌದು ಮತದಾರರನ್ನು ಸಡೆಯಲು ಚುನಾವಣೆಗೆ ನಿಂತಿರುವಂತಹ ಅಭ್ಯರ್ಥಿಗಳು ಸೀರೆ ಕುಕ್ಕರು ಇನ್ನಿತರ ವಸ್ತುಗಳನ್ನು ಗಿಫ್ಟಾಗಿ ನೀಡುವುದು ಸರ್ವೇ ಸಾಮಾನ್ಯವಾಗಿತ್ತು. ಆದರಿಗ ಚುನಾವಣಾ ಆಯೋಗವು ಇದಕೆಲ್ಲ ಬ್ರೇಕ್ ಹಾಕಿದೆ.

2023 ನೆಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್ ಅಕ್ರಮವಾಗಿ ಕುಕ್ಕರ್- ಸೀರೆ ಹಂಚಿದ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೋಟಿಸ್ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣೆ ಆಯುಕ್ತರು ಮತ್ತು ದಾವಣಗೆರೆ ಜಿಲ್ಲಾಧಿಕಾರಿಗಳಿಗೂ ನೋಟಿಸ್ ನೀಡಲಾಗಿದೆ. ಚುನಾವಣೆ ನಡೆದು 8 ತಿಂಗಳಾದರು ತನಿಖೆ ನಡೆಸದೇ ಇರೋದಕ್ಕೆ ನ್ಯಾಯಾಲಯ ಸ್ಪಷ್ಟನೆ ಕೇಳಿದೆ.

ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ಮತ್ತು ಅವರ ಪುತ್ರ ಎಸ್‌ಎಸ್‌ ಮಲ್ಲಿಕಾರ್ಜುನ್ ದಾವಣಗೆರೆ ಉತ್ತರದಿಂದ ಸ್ಪರ್ಧಿಸಿದ್ದರು. ಚುನಾವಣೆ ಸಮಯದಲ್ಲಿ ಅವರು ನೀತಿ ಸಂಹಿತಿ ಉಲ್ಲಂಘಿಸಿ ಅಕ್ರಮವಾಗಿ ಕುಕ್ಕರ್ ಸೀರೆ ಹಂಚಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ನ್ಯಾಯಾಲಯದ ಮೊರೆ ಹೋಗಿದ್ದ ಪರಾಜಿತ ಅಭ್ಯರ್ಥಿ

ಈ ಬಗ್ಗೆ ಶಾಮನೂರು ಶಿವಶಂಕರಪ್ಪ ವಿರುದ್ಧ ಗಾಂಧಿನಗರ ಪೊಲೀಸ್ ಠಾಣೆ ಮಲ್ಲಿಕಾರ್ಜುನ ವಿರುದ್ಧ ಕೆಟಿಜಿ ನಗರದಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ದಕ್ಷಿಣ ಪಕ್ಷೇತರ ಪರಾಜಿತ ಅಭ್ಯರ್ಥಿ ಸುಭಾನ್ ಖಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

 

Related