ಸ್ಮಾರ್ಟಸಿಟಿ ಕಾಮಗಾರಿ ವೀಕ್ಷಿಸಿದ ರೇಣುಕಾ

  • In State
  • July 10, 2020
  • 757 Views
ಸ್ಮಾರ್ಟಸಿಟಿ ಕಾಮಗಾರಿ ವೀಕ್ಷಿಸಿದ ರೇಣುಕಾ

ತುಮಕೂರು:ಸಾರ್ವಜನಿಕರು ಹಾಗೂ ೧೫ನೇ ವಾರ್ಡಿನ ಪಾಲಿಕೆ ಸದಸ್ಯರ ದೂರಿನ ಹಿನ್ನೆಲೆಯಲ್ಲಿ ಪಾಲಿಕೆಯ ಆಯುಕ್ತ ರೇಣುಕಾ ಅವರು ನಗರದ ರಾಧಾಕೃಷ್ಣ ರಸ್ತೆಯ ಉಪ್ಪಾರಹಳ್ಳಿ ರೈಲ್ವೆ ಮೇಲ್ಸೇತುವೆ ಬಳಿ ಸ್ಮಾರ್ಟಸಿಟಿ ಕಾಮಗಾರಿ ವೀಕ್ಷಣೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿದರು.
ನಗರದ ರಾಧಾಕೃಷ್ಣ ರಸ್ತೆಯಲ್ಲಿ ಸ್ಮಾರ್ಟ್ ಸಿಟಿಯಿಂದ ಕಾಮಗಾರಿ ನಡೆಯುತ್ತಿದ್ದು, ಒಂದು ಬದಿ ಮಾತ್ರ ಚರಂಡಿ ನಿರ್ಮಿಸಿ, ಮತ್ತೊಂದು ಬದಿ ಮನೆಯ ಮಳೆ ನೀರು ರಸ್ತೆಯ ಮೇಲೆ ಹರಿದು ಹೋಗುವಂತೆ ಅವೈಜ್ಞಾನಿಕವಾಗಿ ಕಾಮಗಾರಿ ನಿರ್ಮಿಸಿದ್ದ ಬಗ್ಗೆ ಆ ಭಾಗದ ನಾಗರೀಕರು ಹಾಗೂ ಪಾಲಿಕೆಯ ಸದಸ್ಯ ಗಿರಿಜಾ ಧನಿಯ ಕುಮಾರ್ ಅವರು ದೂರು ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಮಳೆ ನೀರು ರಸ್ತೆಯ ಹರಿದು ಹೋಗುವಂತೆ ಕಾಮಗಾರಿ ನಿರ್ಮಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸ್ಮಾರ್ಟ್ ನಗರದ ನಿರ್ಮಾಣದ ಹಿನ್ನೆಲೆ ರಸ್ತೆಯ ಎರಡು ಬದಿ ಚರಂಡಿ ನಿರ್ಮಿಸಬೇಕಾದ ಅಧಿಕಾರಿಗಳು ಕೇವಲ ಒಂದು ಬದಿ ಚರಂಡಿ ನಿರ್ಮಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆಯುಕ್ತರ ಪ್ಲಾನ್‌ನಲ್ಲಿ ಇಲ್ಲ ಎಂದ ಮಾತ್ರ ಜನರಿಗೆ ತೊಂದರೆಯಾಗುವ ರೀತಿ ಕಾಮಗಾರಿ ಮಾಡುವುದು ಸರಿಯಲ್ಲ. ಕೂಡಲೇ ಇನ್ನೊಂದು ಬದಿಯ ಚರಂಡಿಗೆ ಹೆಚ್ಚುವರಿ ಕಾಮಗಾರಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಜನರಿಗೆ ಅನುಕೂಲವಾಗುವಂತೆ ಕಾಮಗಾರಿ ನಿರ್ಮಿಸಬೇಕೆ ಹೊರತು, ಗುತ್ತಿಗೆದಾರರು, ಅಧಿಕಾರಿಗಳಿಗೆ ಅನುಕೂಲವಾಗುವಂತೆ ಕಾಮಗಾರಿ ನಿರ್ಮಿಸುವುದು ಅಭಿವೃದ್ಧಿಯಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಈ ವೇಳೆ ಮಾತನಾಡಿದ ಆಯುಕ್ತರು, ನಗರವನ್ನು ಕೊರೋನ ಮುಕ್ತವಾಗಿಸಲು ಜಿಲ್ಲಾಡಳಿತ, ಜನಪ್ರತಿನಿಧಿಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಮುಂದಿನ ವಾರದಿಂದ ನಗರದಲ್ಲಿ ಸಾನಿಟೈಜರ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಬೇಕಾದ ಯಂತ್ರೋಪಕರಣ ತರಿಸಲಾಗಿದೆ. ಅಲ್ಲದೆ ಸ್ಮಾರ್ಟಸಿಟಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡು ಜನರಿಗೆ ಅಗತ್ಯ ಸೌಲಭ್ಯ ಒದಗಿಸುವುದಕ್ಕೆ ಒತ್ತು ನೀಡಲಾಗುವುದು ಎಂದರು.

Related