ರೈನಾ ಹೆಂಡತಿ ಪ್ರಿಯಾಂಕ ಬಗ್ಗೆ ನಿಮಗೆಷ್ಟು ಗೊತ್ತು?

ರೈನಾ ಹೆಂಡತಿ ಪ್ರಿಯಾಂಕ ಬಗ್ಗೆ ನಿಮಗೆಷ್ಟು ಗೊತ್ತು?

ಮಾ. 18 : ಇಂಡಿಯಾದ ಕ್ಯೂಟ್ ಜೋಡಿ ಎಂದರೆ ಅದು ಸುರೇಶ್ ರೈನಾ ಹಾಗೂ ಪ್ರಿಯಾಂಕ ಚೌಧರಿ. ರೈನಾ 2015ರ ಏಪ್ರಿಲ್ 3 ರಂದು ತನ್ನ ಬಾಲ್ಯಕಾಲದ ಸಖಿ ಪ್ರಿಯಾಂಕ ಚೌಧರಿಯನ್ನ ವರಿಸಿ ಮದುವೆಯಾದರು. ಆದರೆ, ರೈನಾ ಅವರ ಹೆಂಡತಿ ಪ್ರಿಯಾಂಕ ಯಾರು ಎಂಬುದು ಕ್ರೀಡಾಭಿಮಾನಿಗಳಿಗೆ ತಿಳಿದೇಯಿಲ್ಲ. ಕ್ರಿಕೆಟರ್ ಆಗುವ ಕನಸು ಕಂಡಿದ್ದ ರೈನಾ ಅವರು ಮೊದಲು ಕೋಚಿಂಗ್ ಪಡೆದಿದ್ದು ಪ್ರಿಯಾಂಕ ಅವರ ತಂದೆ ತೇಜ್ಪಾಲ್ ಚೌಧರಿ ಬಳಿ. ತನ್ನ ಕ್ರಿಕೆಟ್ ಗುರುವಿನ ಮನೆಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ರೈನಾ ಅವರು ಮೊಟ್ಟ ಮೊದಲ ಬಾರಿಗೆ ಪ್ರಿಯಾಂಕ ಅವರನ್ನು ನೋಡಿದರಂತೆ. ಅಲ್ಲೆ ಲವ್ ಅಟ್ ಫಸ್ಟ್ಸೈಟ್ ಎಂಬ ಹಾಗೆ ಇಬ್ಬರು ಕೂಡ ಒಂದೇ ನೋಟದಲ್ಲಿ ಪ್ರೇಮಾಂಕುರಕ್ಕೆ ಬಂಧಿಯಾದರು.
ಅಲ್ಲಿಂದ ಶುರುವಾದ ಡೇಟಿಂಗು, ಚಾಟಿಂಗೂ ಇಬ್ಬರನ್ನ ಒಂದಾಗಿಸಿ, ದಾಂಪತ್ಯ ಜೀವನಕ್ಕೆ ದಾರಿ ಮಾಡಿಕೊಟ್ಟಿತು. ಇದು ಇವರ ಲವ್ ಸ್ಟೋರಿಯಾದರೆ, ಪ್ರೀಯಾಂಕ ಅವರ ಬಗ್ಗೆ ನೀವು ತಿಳಿಯಲೇ ಬೇಕಾದ ಕೆಲ ಸಂಗತಿಗಳಿವೆ.ಪ್ರಿಯಾಂಕ ಚೌಧರಿ ಅವರು ಬಿಟೆಕ್ ಪದವಿ ವಿಜೇತೆ. ಉತ್ತರ ಪ್ರದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಒಂದರಲ್ಲಿ ಬಿಟೆಕ್ ಪದವಿ ಪಡೆದ ಪ್ರಿಯಾಂಕ ನೆದರ್ಲೆಂಡ್ನಲ್ಲಿ ನೆಲೆಸಿದ್ದರು. ಅಲ್ಲಿಯೇ ಖಾಸಗಿ ಬ್ಯಾಂಕ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹೀಗಿದ್ದರು ರೈನಾ ಅವರ ಎಲ್ಲಾ ವಿಷಯಗಳಲ್ಲೂ ಪ್ರಿಯಾಂಕ ಪಾಲು ಬಹುದೊಡ್ದುದು. ಅದೇನೇ ನಿರ್ಧಾರ ತೆಗೆದುಕೊಳ್ಳಲಿದ್ದರು ರೈನಾ ಅವರು ಪ್ರಿಯಾಂಕ ಮಾತಿಗೆ ಹೆಚ್ಚು ಒತ್ತು ನೀಡುತ್ತಾರಂತೆ. ರೈನಾರನ್ನು ಮದುವೆಯಾದ ಬಳಿಕ ಪ್ರಿಯಾಂಕ ಭಾರತದಲ್ಲೇ ನೆಲೆಸಿದ್ದಾರೆ. ಅಲ್ಲದೇ ಇಲ್ಲಿದ್ದುಕೊಂಡೇ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಿಷ್ಟೆ ಅಲ್ಲದೆ ರೆಡಿಯೋ ಸ್ಟೇಷನ್ವೊಂದನ್ನು ನಡೆಸುತ್ತಿರುವ ಪ್ರಿಯಾಂಕ ಅವರು ಹೆಣ್ಮು ಮಕ್ಕಳ ದನಿಯಾಗಿದ್ದಾರೆ. ಹಿಂದುಳಿದ ಪ್ರದೇಶಗಳ ಹೆಣ್ಣು ಮಕ್ಕಳಿಗೆ ಉಚಿತ ಆರೋಗ್ಯ ಸಲಹೆ, ತಪಾಸಣೆ ನಡೆಸುವಂತ ಕಾರ್ಯಕ್ರಮಗಳನ್ನು ನಡೆಸಿ ಮಾದರಿಯಾಗಿದ್ದಾರೆ.

Related