ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣಕ್ಕೆ ಸೂರಜ್ ಹೇಳಿದ್ದೇನು?

ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣಕ್ಕೆ ಸೂರಜ್ ಹೇಳಿದ್ದೇನು?

ಹಾಸನ: ಜೆಡಿಎಸ್ ಪಕ್ಷದ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ಈಗ ರಾಜ್ಯ ರಾಜಕೀಯದಲ್ಲಿ ಬಾರಿ ಬಿರುಗಾಳಿಯನ್ನು ಎಬ್ಬಿಸಿದೆ.

ಈಗಾಗಲೇ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ ಅಧಿಕಾರಿಗಳಿಗೆ ನೀಡಿದ್ದು, ಎಸ್ಐಟಿ ಅಧಿಕಾರಿಗಳು ಚುರುಕಿನ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. ಇನ್ನು ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಅಣ್ಣ ಸೂರಜ್ ರೇವಣ್ಣ ಅವರು ಮೊದಲ ಬಾರಿ ಪ್ರತಿಕ್ರಿಯೆಸಿದ್ದಾರೆ

ನಗರದಲೆಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿದ್ದಾರೆ ಏನು ಸಾಭೀತಾಗುತ್ತೋ ಅಗುತ್ತೆ, ಪ್ರಜ್ವಲ್ ರೇವಣ್ಣ ಬಗ್ಗೆ ನನಗೆ ಮಾಹಿತಿ‌ ಇಲ್ಲ. ಆದರೆ ರೇವಣ್ಣ ಅವರ ಮೇಲೆ ಸಾವಿರ ಎಫ್‌ಐಆರ್ ಆಗಲಿ ಏನು ಸಾಭೀತಾಗಬೇಕು ಆಗುತ್ತೆ. ಹಾಸನ ಜಿಲ್ಲೆಯ ರಾಜಕೀಯದಲ್ಲಿ ರೇವಣ್ಣರಿಗೆ ಪ್ರತಿ ಸ್ಪರ್ಧಿ ಯಾರೂ ಇಲ್ಲ. ಅವರನ್ನ ವೀಕ್ ಮಾಡಲು ಈ ರೀತಿ ಷಡ್ಯಂತ್ರ ಮಾಡುತ್ತಿದ್ದಾರೆ. ಜಿಲ್ಲೆಯ ಜನರಿಗೆ, ಕ್ಷೇತ್ರದ ಮತದಾರರಿಗೆ ರೇವಣ್ಣ ಸಾಹೇಬ್ರು ಏನು ಅಂತ ಗೊತ್ತಿದೆ ಎಂದ ಹೇಳಿದರು.

ಇದನ್ನೂ ಓದಿ: ಯಾರೇ ಎಷ್ಟೇ ಗಿಮಿಕ್ ಮಾಡಿದರು ನಾವೇ ಗೆಲ್ಲೋದು: ವಿನಯ್ ಕುಲಕರ್ಣಿ

ಪ್ರಜ್ವಲ್ ಪ್ರಕರಣದಲ್ಲಿ ರಾಜಕೀಯ ಘಟಾನುಘಟಿ ವ್ಯಕ್ತಿಗಳ ಬಾಗಿಯಾಗಿದ್ದಾರೆ ಸೊಸೈಟಿ ತನಿಖೆ ನಂತರ ಯಾರೆಲ್ಲಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಹೊರ ಬೀಳುತ್ತಲ್ಲ ಆಗ ಜನರಿಗೆ ಅಸಲಿಯತ್ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

Related