ಕುಟುಂಬದ ಫೋಟೊ ಅಭಿಮಾನಿಗಳ ಮೆಚ್ಚುಗೆ

  • In Cinema
  • July 7, 2022
  • 214 Views
ಕುಟುಂಬದ ಫೋಟೊ ಅಭಿಮಾನಿಗಳ ಮೆಚ್ಚುಗೆ

ನಟಿ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕುಟುಂದ ಫೋಟೊವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ ನಟನೆಯಿಂದ ದೂರ ಉಳಿದಿರುವ ರಾಧಿಕಾ, ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಮಕ್ಕಳಾದ ಐರಾ, ಯಥರ್ವ್ ಹಾಗೂ ಪತಿ ಯಶ್ ಜೊತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ರಾಧಿಕಾ, ಪದೇ ಪದೇ ಯಶ್ ಮತ್ತು ಮಕ್ಕಳ ಜೊತೆಗಿನ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಈ ಫೋಟೊ ಸಖತ್ ವೈರಲ್ ಆಗುತ್ತಿದೆ. ಯಶ್, ರಾಧಿಕಾ ಕುಟುಂಬ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ.

2019 ರಲ್ಲಿ ತೆರೆಗೆ ಬಂದ ಆದಿ ಲಕ್ಷ್ಮೀ ಪುರಾಣ ಚಿತ್ರದಲ್ಲಿ ರಾಧಿಕಾ ನಟಿಸಿದ್ದರು. ಇದಾದ ನಂತರದಲ್ಲಿ ಅವರು ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ. ಯಶ್ ಅವರ ಕೆ.ಜಿ.ಎಫ್2 ಸಿನಿಮಾ ಭಾರತೀಯ ಸಿನಿಮಾ ಇತಿಹಾಸದಲ್ಲೇ ದಾಖಲೆಯ ಗಳಿಕೆ ಕಂಡಿದೆ.

Related