ಆಸ್ತಿ ಕಬಳಿಸಲು ಸ್ಕೇಚ್..!

  • In Crime
  • March 9, 2020
  • 406 Views
ಆಸ್ತಿ ಕಬಳಿಸಲು ಸ್ಕೇಚ್..!

ಕಲಬುರಗಿ, ಮಾ.09 : ಸೇಡಂ ತಾಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಲಿಂಗೈಕರಾಗುತ್ತಿದ್ದಂತೆ ಕೋಟಿ ಕೋಟಿಯ ಆಸ್ತಿಯ ಮೇಲೆ ಹಲವರು ಕಣ್ಣು ಬಿದ್ದಿದೆ. ಹೀಗಾಗಿ ಇದೀಗ ಮಠದ ಆಡಳಿತ ಮಂಡಳಿ ಸದಸ್ಯರ ವಿರುದ್ಧ ಮಠದ ಭಕ್ತರು ಸಮರ ಸಾರಲು ಮುಂದಾಗಿದ್ದಾರೆ.
ಅಮ್ಮನವರು ಜೀವಿತಾವಧಿಯಲ್ಲಿ ಸಾಮಾಜಿಕ ಕಾರ್ಯಕ್ಕೆ ಅಂತ “ರೂಪ ರಹಿತಾ ಅಂಹಿಸಾ ಯೋಗೇಶ್ವರ ವೀರ ಧರ್ಮಜಾ ಮಾತಾ ಮಾಣಿಕೇಶ್ವರಿ ಟ್ರಸ್ಟ್ ಯಾನಾಗುಂದಿ” ಹುಟ್ಟಿಹಾಕಿದ್ದು, ಆ ಟ್ರಸ್ಟ್ ಅಡಿ ಯಾನಾಗುಂದಿಯಲ್ಲಿ 254 ಎಕರೆ ಜಮೀನು ಸೇರಿದಂತೆ, ಕಲಬುರಗಿ, ಬೀದರ್, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಆಂಧ್ರ-ತೆಲಂಗಾಣದಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದೆ. ಈ ಆಸ್ತಿಯ ಮೇಲೆ ಇದೀಗ ಇಲ್ಲಿನ ಆಡಳಿತ ಮಂಡಳಿ ಸದಸ್ಯರು ಕಣ್ಣಿಟ್ಟಿದ್ದಾರೆ.

Related